ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರೇಶ ಎಲ್ ರಾಜಮಾನೆ ಕವಿತೆ- ಎದೆಗೆ ಇರಿದ ಸೂಜಿ…

ಸುರೇಶ ಎಲ್ ರಾಜಮಾನೆ

ಮೂಕ ಮಾತಾಡ್ತಾ ಮಾತಾಡ್ತಾ ನಕ್ಕ
ಎದುರಿಗಿದ್ದವನು ಮೌನವಹಿಸಿದ
ಶುರುವಾಯಿತು ಸದ್ದು
ಲಬ್ ಡಬ್ ಲಬ್ ಡಬ್
ಒಳಜಗತ್ತಿನ ತುಂಬೆಲ್ಲ ಬರಿ ಇದೇ
ಕೇಳಿಸುತ್ತಿತ್ತು

ಹಾರಿ ಬರುವ ತರಗೆಲೆಯೊಂದು
ಗಾಳಿಯಲ್ಲಿಯೇ ನಿಂತು
ಗೋಗರೆಯುತ್ತಿತ್ತು
ತಂಪಿಲ್ಲ ಇಂಪಿಲ್ಲ ಎಲ್ಲವೂ ಬರಿ ಧೂಳು
ಯಾರಿಹರು
ಕೇಳವುದಕಿಲ್ಲಿ ಗೋಳು

ಸೋರುತ್ತಿರುವ ನಲ್ಲಿಯಮೇಲೊಂದು
ಹಕ್ಕಿ ಕುಳಿತು ಸ್ನಾನಕ್ಕಾಗಿ
ಹಾತೊರೆಯುತ್ತಿತ್ತು
ಬಣ್ಣಗಳ ಬೆರೆಸಿ ಹೋಳಿ ಆಚರಿಸಿದವರು
ಇದನ್ನು ನೋಡಿ
ತಲೆಕೆಳಗೆ ಹಾಕಿದರು

ಹರಿದ ಬಟ್ಟೆಯಮೇಲಿನ ಹರಿದ ಚಿತ್ರ
ಏನೊ ಕಥೆ ಹೇಳುತ್ತಿತ್ತು
ಕೇಳಲು ಕಿವಿಗಳ ಅವಶ್ಯಕತೆಯಿಲ್ಲ
ಎದೆಗೆ ಇರಿದ ಸೂಜಿ
ಬದಿಗೆ ಸರಿದ ದಾರ
ಬದುಕನ್ನೆ ಚಿತ್ರಿಸಿದ್ದವು

ಮೂಕ ಮತ್ತೆ ಮಾತಾಡಲು ಶುರುಮಾಡಿದ
ಎದುರಿಗಿದ್ದವನ ಮೌನ ಸಮ್ಮತಿಸಲಿಲ್ಲ
ಅರ್ಥವಿಲ್ಲದ ಪ್ರಶ್ನೆಗಳಿಗೆ
ಸುಮ್ಮನಿರುವುದೇ ಉತ್ತರ
ಎಂದರಿತುಕೊಂಡ ಮೌನವೂ
ಈಗ ಮೂಕ ಸ್ತಬ್ಧ.

‍ಲೇಖಕರು Admin

21 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading