ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಾ ಕಂಚೀಪಾಲ್ ಹೊಸ ಕವಿತೆ – ಆಸೆ…

ಸುಮಾ ಕಂಚೀಪಾಲ್

ತನ್ನ ವಲಯದ
ಹೊರಗೆ ನಿಂತಿದ್ದ
ಅವಳಿಗೆ ಅವನದೇ ಚಿಂತೆ

ಅವನಂತೋ ಬಿಡಿ
ಮೂತ್ರ ಗುರುತು
ರೇಖೆ ಎಳೆದ ನಾಯಿಯಂತೆ

ತನ್ನದ್ದನ್ನು ಬಿಟ್ಟು
ಕದಲದ ಜಾಯಮಾನ
ಇವಳಿಗೆ ಅವಮಾನ

ಅವನಾಸೆಯ
ಸತ್ತ ಹೆಣಗಳು
ಇವಳಲ್ಲಿ
ಕೊಳೆಯುತ್ತಿದ್ದರೂ

ಇವಳಿಗೆ ಕಾಣಿಸುವುದು
ಅವನದೇ ಸರೋವರ
ತನ್ನ ಬಯಕೆಯ ಹಡಗು
ಆದರೆ..

ಇವಳ ಕಣ್ಣಲ್ಲಿ ಕಂಡ
ಆಸೆಯ ಮೀನನ್ನು
ಅವನು ತನ್ನ ಗಾಳಕ್ಕೆ
ಬಲಿಯಾಗಿಸಿದ್ದ

‍ಲೇಖಕರು Admin

23 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading