ಮೀನಿನಾಸೆಗೆ ಬಲೆಯಲ್ಲಿ ಬಂಧಿಯಾದ ‘ಮೀನು ಗರುಡ’

ಮಾಲತೇಶ ಅಂಗೂರ

‘ವೀಕೆಂಡ್ ಕರ್ಫೂನಿಂದಾಗಿ ಎರಡು ದಿನಗಳ ಮನೆವಾಸ’ ಟೀವಿಯಲ್ಲಿ ಬರುತ್ತಿದ್ದ ಸುದ್ದಿಗಳನ್ನು ನೋಡಿ-ಕೇಳಿ ತಲೆಚಿಟ್ಟುಹಿಡಿದಂತಾಗಿತ್ತು. ‘ಈ ವಾತಾವರಣದಿಂದ ಹೊರಬರಲು ಕೆರೆಯಕಡೆಗೆ ಹೋದರಾಯಿತು’ ಎಂದು ಎಂದು ಭಾನುವಾರರಾತ್ರಿಯೇ ಕ್ಯಾಮೇರವನ್ನು ಶುಚಿಗೊಳಿಸಿ, ಬ್ಯಾಟರಿ ಜಾರ್ಜಮಾಡಿಟ್ಟಿದ್ದೆ. ಸೋಮವಾರ (ಜ.೧೭) ಬೆಳಗಿನ ಜಾವ ಹೆಗ್ಗೇರೆಕೆರೆಯ ದಾರಿಕಡೆಗೆ ಬೈಕ್ ಓಡಿಸಿದೆ.

ಹೆಗ್ಗೇರಿಕೆರೆಯ ಪರಿಸರಕ್ಕೆ ಭೇಟಿ ನೀಡಿದ ವೇಳೆ ‘ವಾತಾವರಣದಲ್ಲಿ ಬದಲಾವಣೆಯಾಗಿ ಚಳಿಯ ವರತೆ ಕಡಿಮೆಯಾಗಿ ನಿದಾನವಾಗಿ ಬಿಸಿಲಿನತಾಪ ಎರಿಕೆಯಲ್ಲಿದ್ದ ಕಾರಣಕ್ಕೆ ವಾತಾವರಣ ಬಹಳ ಹಿತಕರವಾಗಿತ್ತು’. ಕೆರೆಯ ಪ್ರದೇಶಕ್ಕೆ ಬೈಕ್ ಪ್ರವೇಶಿಕೆಯಾಗುತ್ತಿದ್ದಂತೆ, ಸಹಜವಾಗಿ ಕೆರೆಯ ಕಡೆಗೆ ಕಣ್ಣುಹಾಯಿಸಿದೆ.

‘ಮೀನು ಗರುಡ’ ಬೆಲೆಯಲ್ಲಿ ಬಂಧಿಯಾಗಿದ್ದ ಕೆಲವು ದೃಶ್ಯಗಳನ್ನು ಅದಾಗಲೇ ನಾನು ಕ್ಯಾಮೇರಾದಲ್ಲಿ ಸೆರೆಯಾಗಿದ್ದವು ಇತ್ತ ‘ಮೀನುಗರುಡನಿಗೆ ಏನಾಯಿತು’? ಎನ್ನುವ ಚಿಂತೆ ನನ್ನ ಕಾಡತೊಡಗಿತು. ಕ್ಯಾಮೇರಾವನ್ನು ಬ್ಯಾಗಿನಲ್ಲಿರಿಸಿ ‘ಮೀನಿನ ಬಲೆಗೆ ಸಿಲಕಿ ಬಂಧಿಯಾದ ಗಿಡುಗನ ಸ್ಥಿತಿ ಏನಾಯಿತು? ಎಂದು ಗರುಡ ಬಿದ್ದ ಸ್ಥಳದಲ್ಲಿ ಹುಡುಕಾಡಿದೆ’. ‘ಅದಾಗಲೇ ಮೀನುಗರುಡ ತಾನು ಸಿಲುಕಿದ ಮೀನಿನ ಬಲೆಯಿಂದ ಹೊರಬರಲು ಮೀನಿನ ಬಲೆಯ ಪ್ಲಾಸ್ಟಿಕ್ ವಾಯರ್‌ಗಳನ್ನು ಮೈಯ್ ಎಲ್ಲಾ ಸುತ್ತಿಕೊಂಡು ಒದ್ದಾಡುತ್ತಿರುವ ಚಿತ್ರಣ ಕಂಡಿತು’.

‘ಸುತ್ತ-ಮುತ್ತ ನೋಡಿದೆ, ಸಹಾಯಕ್ಕಾಗಿ ಯಾರಾದರೂ ಬರುವರೋ ಎಂದು. ಯಾರೂ ಕಾಣಿಸಲಿಲ್ಲ. ಈ ವೇಳೆ ಗಿಡ-ಗಂಟೆಗಳ ಮಧ್ಯ ಸಿಲುಕಿದ್ದ ಗರುಡನ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು ಸ್ವಲ್ಪ ಕಷ್ಟದ ಕೆಲಸವೇ ಅನ್ನಿಸಿತು’! ‘ಮೇಲಾಗಿ ಮೀನುಗರುಡನ ರಕ್ಷಣೆ ಮುಖ್ಯ’ ಎಂದು ಗರುಡಪಕ್ಷಿಯ ರಕ್ಷಣಾ ಕಾರ್ಯಾಚರಣೆಗೆ ಮುಂದಾದೆ.

‘ಮೊದಲಿಗೆ ಗರುಡನ ಹತ್ತಿರ ಹೋದ ವೇಳೆ ಭಯದಿಂದ ನನ್ನ ಕಡೆಗೆ ನೋಡಿದ ಗರುಡ ಜೋರಾಗಿ ರೆಕ್ಕೆಗಳನ್ನು ಬಡಿಯುವ ಪ್ರಯತ್ನ ಮಾಡಿ ನನ್ನಿಂದ ತಪ್ಪಿಸಿಕೊಂಡು ಹಾರಿಹೋಗಲು ಯತ್ನಿಸಿತು’. ‘ಆದರೆ ಮೀನಿನ ಬಲೆಯ ಪ್ಲಾಸ್ಟಿಕ್‌ದಾರದ ಎಳೆಗಳು ಅದರ ಕಾಲು-ಕೊಕ್ಕು ಸುತ್ತುವರಿದ ಕಾರಣಕ್ಕೆ ಸಾಧ್ಯವಾಗಲಿಲ್ಲ. ‘ಈ ವೇಳೆ ಗುರಡವನ್ನು ರಕ್ಷಿಸಲು ನಾನು ಒಂದ ಕ್ಷಣ ಹಿಂಜರಿದೆ’!.

ಅಗ್ನಿಶಾಮಕ ಸಿಬ್ಬಂದಿಗಳಿಗೆ, ಅರಣ್ಯ ಇಲಾಖೆಯವರಿಗೆ, ಪೊಲೀಸರಿಗೆ ಕರೆ ಮಾಡಿ ಅವರಿಗೆ ವಿಷಯ ತಿಳಿಸಿದರೇ, ಅವರು ಸ್ಥಳಕ್ಕೆ ಬಂದು ಬಲೆಗೆ ಸಿಲುಕಿದ್ದ ಪಕ್ಷಿಯನ್ನು ರೆಸ್ಕ್ಯೂ ಮಾಡುತ್ತಾರೆ ಎಂದುಕೊಂಡೆ’. ಆದರೆ, ‘ಅವರು ಬರುವಷ್ಟರಲ್ಲಿ ಮೀನುಗರುಡಕ್ಕೆ ಸಿಲುಕಿರುವ ಉರುಳು ಬಿಗಿದು ಇದರ ಪ್ರಾಣಪಕ್ಷಿ ಹಾರಿಹೋದರೆ”? ಎನ್ನುವ ಪ್ರಶ್ನೆ ಸುಳಿದು ಹೋಯಿತು. ‘ಬೇಡಾ, ಅವರುಗಳಿಗೆ ಕರೆಮಾಡುತ್ತಾ ಹೋದರೆ ಸಮಯ ಹೋಗುತ್ತದೆ ಎಂದುಕೊಂಡು ಹೇಗಾದರೂ ಸರಿ ಬಲೆಯಿಂದ ಗರುಡನ ರಕ್ಷಣೆಗೆ ನನ್ನಿಂದಾದ ಪ್ರಯತ್ನ ಮಾಡಿದರಾಯಿತು’ ಎಂದು ಕೊಂಡು “ಬೈಕ್ ಚಾವಿಯನ್ನು ಹಿಡಿದು, ಹೆದರುತ್ತಾ ಗರಡುನ ಹತ್ತಿರ ಹೋದೆ”.

ಅಷ್ಟರಲ್ಲಿಯೇ “ಮೀನಿನಬಲೆಯಲ್ಲಿ ಬಂಧಿಯಾಗಿದ್ದ ಗರುಡ ಅಕಾಡದಲ್ಲಿ ಮಣ್ಣು ಮುಕ್ಕಿದ ಪೈಲ್ವಾನನ ಹಾಗೆ ಬಿದ್ದಿತ್ತು”. “ನನ್ನ ಮೊಣಕಾಲುಗಳಲ್ಲಿ ಗರುಡಪಕ್ಷಿಯನ್ನು ಒತ್ತಿ ಹಿಡಿದು, “ಬೈಕ್ ಚಾವಿಯನ್ನೇ ಚಾಕುವಿನ ರೀತಿಯಲ್ಲಿ ಬಳ ಗರುಡಪಕ್ಷಿಯನ್ನು ಸುತ್ತಿಕೊಂಡಿದ್ದ ಮೀನಿನಬಲೆಯ ವಾಯರ್‌ಗಳನ್ನು ಕತ್ತರಿಸಿದೆ”. “ಮೀನಿನ ಬಲೆಯ ವಾಯರ್‌ಗಳನ್ನು ಸವಕಾಶವಾಗಿ ನಾನು ತಗೆಯುತ್ತಿದ್ದ ವೇಳೆ ಗಿಡುಗ ಮೀಸುಕಾಡತೊಡಗಿತು”.

“ಸತತ ಅರ್ಧತಾಸು ಕಾರ್ಯಾಚರಣೆ ನಡೆಸಿದ ನನಗೆ ಭಯ ಹೆಚ್ಚಾಗತೊಡಗಿತು”!. “ಎಲ್ಲಿ ಮೀನುಗರುಡ ನನ್ನಮೇಲೆ ದಾಳೀ ಮಾಡುವನೋ ಎಂದು”!. ಆದರೆ ಆರೀತಿ ಆಗಲಿಲ್ಲ. “ಬಲೆಯಿಂದ ಬಂಧಮುಕ್ತ” ವಾದ “ಮೀನು ಗರುಡ, ತನ್ನ ಹರಿತವಾದ ಕಣ್ಣುಗಳಿಂದ ನನ್ನ ಕಡೆಗೆ ಅಪದಕಮಸ್ತನೋಟ ಬೀರಿ, ಮೊಣಕಾಲಿನ ಹಿಡಿತದಿಂದ ಬಿಡಿಸಿಕೊಂಡು ನಿಧಾನವಾಗಿ ನಡೆದುಕೊಂಡು ತುಸುದೂರ ಹೋಗಿ, “ಬದುಕಿದೆಯಾ ಬಡ ಜೀವ ಎನ್ನುತ್ತಾ ಆಕಾಶದೆಡೆಗೆ ರೆಕ್ಕೆ ಬೀಸಿತು”.

ಗರುಡನನ್ನು ರಕ್ಷಿಸುವ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಕೈ ಬೆರಳುಗಳಿಗೆ ತರುಚಿದ ಗಾಯಗಳಾಗಿ ರಕ್ತ ಜೀನುಗುತ್ತಿತ್ತು. “ಮೀನುಗರುಡ”ಪಕ್ಷಿಯನ್ನು ರಕ್ಷಿಸಿದ ಸಂತೃಪ್ತ ಭಾವನನ್ನದಾಗಿತ್ತು.

‍ಲೇಖಕರು Admin

January 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: