ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಬ್ಬು ಹೊಲೆಯಾರ್ ಕವಿತೆ: ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ

ಸುಬ್ಬು ಹೊಲೆಯಾರ್

ಇವತ್ತು ಬೆಳಿಗ್ಗೆ
ಎಷ್ಟೊಂದು ಹಕ್ಕಿಗಳು ತಮ್ಮ ಉಸಿರನ್ನ
ನಮ್ಮ ಕಿವಿಗೆ ತಾಕಿಸಿಬಿಟ್ಟವಲ್ಲ

ಈ ಸಂಕಷ್ಟದ ಉಸಿರಿನ ದಾರವನ್ನು
ಸೀಳಿ ಸೀಳಿ ನೋಡಿದೆ
ಸೀಳಿದಷ್ಟು ಸಂಕಟ ದುಪ್ಪಟ್ಟಾದಂತೆ ಕೇಳಿಸಿತು

ಸೀಳಿದ ಬೆರಳಲ್ಲಿ ತೇವದ
ದು:ಖ ಸಾಗರವೇ ಅಂಟಿಕೊಂಡಿದ್ದ ಬೆರಳಿನ ತೂಕ
ಲೋಕಕ್ಕಾಗುವಷ್ಟು ಉಪ್ಪಿನ ಮೂಟೆಯಷ್ಟಿತ್ತು

ಎಲ್ಲಾ ಹೇಗಿದ್ದೀರಿ ?
ನಾನು ಕೇಳಬಹುದೇ ಯಾರನ್ನಾದರೂ
ತಲ್ಲಣದ ಈ ಘಳಿಗೆಯಲ್ಲಿ

ಸುಖ ಮಲಗಿದೆ ಹಸಿವು ದು:ಖ ನಡೆಯುತ್ತಿದೆ
ಕಣ್ಣೀರು ಕೊಲೆಯಾಗಿದೆ
ಕರುಣೆ ಬಂದಿಯಾಗಿದೆ ಇಷ್ಟು ಸಾಕು.

ನಾನು ನೆಮ್ಮದಿಯಾಗಿದ್ದೇನೆ
ನೀವು ಉಸಿರಾಡಿದ ಉಸಿರಿನಿಂದ

ಯಾರಿಗದರೂ ಸೇರಿದ್ದಾ ಈ ಉಸಿರು
ಹಕ್ಕಿಲ್ಲ ಯಾರಿಗೂ ಕೇಳಲು
ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ
ಎನ್ನುವ ಉಸಿರಲ್ಲಿ ಎಲ್ಲರ ಉಸಿರಿದೆ ಗೆಳೆಯ
ನೋಡಿದ್ದೀರಾ !
ಎಲೆಗಳು ಅಲುಗಾಡುವುದನ್ನ
ಈ ಉಸಿರಿನ ಸಾಕ್ಷಿಗೆ.

‍ಲೇಖಕರು avadhi

10 May, 2020

2 Comments

  1. Nagraj Harapanahalli.karwar

    ಕಣ್ಣೀರು ಕೊಲೆಯಾಗಿದೆ
    ಹಸಿವು ದುಃಖ ಬಂಧಿಯಾಗಿದೆ…..

    ಕವಿತೆಯಾಗಲು ಇಷ್ಟು ಸಾಕು….ಸುಬ್ಬೂ

  2. Malati Bhat

    ತೀವ್ರವಾದ ಕವಿತೆ…..ಕಾಡುವ ಸಾಲುಗಳು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading