ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಖಾಸುಮ್ಮನೆ ಫ್ಲರ್ಟ್ ಮಾಡುತ್ತಿದ್ದೆ.. 

ದ.ರಾ.ಮುಲ್ತಾನಿ

ಅಂದು,
ಸುಖಾಸುಮ್ಮನೆ ಫ್ಲರ್ಟ್ ಮಾಡುತ್ತಿದ್ದೆ
ಕೂದಲೆಳೆಯ ಸ್ಪರ್ಶಿಸುವ ನೆಪದಲ್ಲಿ
ಮನ ತಣಿಸುತ್ತಿದ್ದೆ ಮುಂಗೋಪದ
ಮಾತಿನಲಿ
ಮನ ಒಡೆವ ಮುನ್ಸೂಚನೆ ನೀಡದೆ

ಇಂದು,
ಅತಿಯಾದ ಆಪ್ಷನ್ ಗಳಿಗೆ
ಅಪಡೇಟ್ ಆದ ಚೆಲುವೆ


ನಕ್ಕರು ನಲಿಯದ ಉಸಿರೊಡತಿ
ಆ ಬೀದಿಯ ದೀಪಕ್ಕೆ ತಿಳಿದ ನೋವು
ನಿನಗೆ ತಿಳಿಯದಾಯಿತೆ

ಅಂದು-ಇಂದಿನ ಮುಂದಿನ ಮಾತು ಬೇಡ
ಎದೆಗೆ ಒದ್ದ ಹಾಗೆ ಹೇಳಿ ಬಿಡು
ಈ ಪುಗ್ಸಟ್ಟೆ ಪಯಣದ
ಮುಂದಿನ ನಿಲ್ದಾಣ ಯಾವುದೆಂದು?

‍ಲೇಖಕರು nalike

10 August, 2020

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading