ದ.ರಾ.ಮುಲ್ತಾನಿ
ಅಂದು,
ಸುಖಾಸುಮ್ಮನೆ ಫ್ಲರ್ಟ್ ಮಾಡುತ್ತಿದ್ದೆ
ಕೂದಲೆಳೆಯ ಸ್ಪರ್ಶಿಸುವ ನೆಪದಲ್ಲಿ
ಮನ ತಣಿಸುತ್ತಿದ್ದೆ ಮುಂಗೋಪದ
ಮಾತಿನಲಿ
ಮನ ಒಡೆವ ಮುನ್ಸೂಚನೆ ನೀಡದೆ
ಇಂದು,
ಅತಿಯಾದ ಆಪ್ಷನ್ ಗಳಿಗೆ
ಅಪಡೇಟ್ ಆದ ಚೆಲುವೆ
ನಕ್ಕರು ನಲಿಯದ ಉಸಿರೊಡತಿ
ಆ ಬೀದಿಯ ದೀಪಕ್ಕೆ ತಿಳಿದ ನೋವು
ನಿನಗೆ ತಿಳಿಯದಾಯಿತೆ
ಅಂದು-ಇಂದಿನ ಮುಂದಿನ ಮಾತು ಬೇಡ
ಎದೆಗೆ ಒದ್ದ ಹಾಗೆ ಹೇಳಿ ಬಿಡು
ಈ ಪುಗ್ಸಟ್ಟೆ ಪಯಣದ
ಮುಂದಿನ ನಿಲ್ದಾಣ ಯಾವುದೆಂದು?
ಚೆನ್ನಾಗಿದೆ