ಶ್ರೀಧರ ಜಿ ಯರವರಹಳ್ಳಿ
**
ಈಗಷ್ಟೆ ಹಸಿವು ಎಂದು ಬಂದವನನ್ನ ಜೈಲಿನ ಒಳಗೆ ನೂಕಲಾಯಿತು ಆದರೆ
ಹೆದ್ದಾರಿಯಲ್ಲಿ ಬಿದ್ದಿದ್ದ ಅನ್ನ
ಅವನನ್ನ ಬಿಡಿಸಿಕೊಳ್ಳಲು ಪ್ರತಿಭಟಿಸುತ್ತಿದೆ!
ಮೊದಲೇ ಎಲ್ಲ ಕಡೆಯೂ ರಾಜಕೀಯ ಧರ್ಮದ್ವೇಷದ ಕುಲುಮೆಯಲಿ
ಬೇಯುತ್ತಿರುವಾಗ
ಜಗದ ಪ್ರೇಮದ ಮಡಿಕೆಯಲಿ
ಚಿಗುರೊಡೆಯುತ್ತಲೇ ಇದೆ
ಭತ್ತ
ಸುಂದರ ಸುಳ್ಳುಗಳು ಸೂರ್ಯನನ್ನೆ ಸುಡುತ್ತಿರುವಾಗ
ಜನರ ಭಾವನೆಗಳನ್ನ
ಹುಸಿ ನಂಬಿಕೆಯ ಪರದೆಗಳಿಂದ ಮುಚ್ಚಿ
ಪ್ರತಿದಿನವೂ ಹುಣ್ಣಿಮೆಯೆಂದು ನಂಬಿಸಲಾಗುತ್ತಿದೆ
ಹಸಿವಾಗುವುದಷ್ಟೇ!
ಹಸಿವು ತನ್ನೆಲ್ಲ ಬಯಕೆಗಳನ್ನ
ಯಾರದೊ ಕನಸುಗಳ ಜೊತೆ
ಚಂದ್ರನ ದೂಳಿನಲ್ಲಿ ನೆಲಸಮಗೊಳಿಸಿರಬಹುದು
ಬಿಸಿ ಉಗಾದಿಯ ವಸಂತವು
ಹಸಿದ ಕಣ್ಣಾಲಿಯಲಿ ಬಿಸಿ ನೀರೊಳಗೆ
ಚಿಗುರೊಡೆಯುತ್ತಿದೆ
ನೋಡಿ ಎಲ್ಲೆಲ್ಲೂ ಹಸಿವು ದೇಹವ ಸುಡುತ್ತಿದೆ!






0 Comments