ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಗರ ಸೇರುವ ಮುನ್ನ…

ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ: ಎಂ ಎಸ್ ವಿದ್ಯಾ

‘ನದಿ’ಯೂ ಭಯದಿಂದ ಕಂಪಿಸುತ್ತಾಳೆ
ಬೆಟ್ಟದ ತುದಿಯಿಂದ ತಾನು ಹರಿದುಬಂದ ಹಾದಿಯ ಮೇಲೆ ಕಣ್ಣು ಹಾಯಿಸುತ್ತಾಳೆ
ಸುರುಳಿ ಸುರುಳಿಯಾಗಿರುವ ನೀಳ ದಾರಿ,
ಕಾಡು ಮತ್ತು ಹಳ್ಳಿಗಳನ್ನು ಬಳಸುತ್ತಾ ಹರಿದ ಪಾತ್ರ.

ಅವಳ ಮುಂದೆ…
ಅಖಂಡ ಸಾಗರ
ಅದರಲ್ಲಿ ಹೊಗುವುದು ಎಂದರೆ
ತನ್ನ ಅಸ್ತಿತ್ವವನ್ನೇ ಮರೆತು ಕರಗಿಹೋಗುವುದು.
ಆದರೆ ಗತ್ಯಂತರವಿಲ್ಲ
ತಾನು ಹಿಂದಕ್ಕೆ ಹರಿಯಲಾಗದು.

ಹೊರಳಿ ಮರಳುವುದು ಇಲ್ಲಿಲ್ಲ,
ಭೂತಕ್ಕೆ ಹೋಗುವುದು ಅಸಾಧ್ಯ,
ತಾನು ಧೈರ್ಯದಿಂದ ಮುನ್ನುಗ್ಗಲೇಬೇಕು,
ಸಾಗರವನ್ನು ಸೇರಲೇಬೇಕು.

ಭಯ ಮರೆಯಾಗುವುದು ಆಗಲೇ,
‘ನದಿ’ಗೆ ಅರಿವಾಗುವುದು ಆಗಲೇ,
ತಾನು ಸಾಗರದಲ್ಲಿ ಕಳೆದುಹೋಗುವುದಿಲ್ಲ,
ತಾನೇ ಸಾಗರವಾಗುತ್ತೇನೆ ಎಂದು!!

‍ಲೇಖಕರು Avadhi

9 June, 2021

2 Comments

  1. ಕಿರಣ್ ಭಟ್

    ತುಂಬ ಒಳ್ಳೆಯ ಅನುವಾದ. ಅಭಿನಂದನೆಗಳು.

  2. ನಾ.ದಾಮೋದರ ಶೆಟ್ಟಿ

    ಸರಳ, ಸುಂದರ ಅನುವಾದ. ಸಾರವತ್ತಾದ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading