ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಹೊಸ ಕವಿತೆ- ಕಾವ್ಯವೆಂದರೆ?

ಸವಿತಾ ನಾಗಭೂಷಣ

—-

ಎಲ್ಲರು ಕೇಳುವರು
ಕಾವ್ಯ ಏನೆಂದು?
ನನಗೆ ನಾನೆ ಕೇಳುವೆ
ಕಾವ್ಯ ಏನೆಂದು?
ಅಯ್ಯೋ …..
ಸಾವಿರ ಸಾವಿರ ರಚನೆಗಳು. ಎಲ್ಲೋ ಒಂದು
ಒಂದೇ ಒಂದು ಸಾವಿರದೆ
ಉಸಿರಾಡುವುದು…
ಎಂಟೆದೆಗೆ ತಪ್ಪುವುದೆ
ಸಾವಿನ ನಂಟು ?

ಕಲ್ಲ ಕಡೆದರೆ
ವಿಗ್ರಹ
ಉಸಿರಾಡಿದರೆ
ದೇವರು!
ಪ್ರಾಣ ಪ್ರತಿಷ್ಠಾಪನೆ ಆಗಿ
ಜೀವ ಸಂಚರಿಸಿದರೆ
ಕಲ್ಲೂ ದೇವರು

ಪದಗಳನೊಟ್ಟಿದರೆ
ಕಲ್ಲು ಮರಳು ಮಣ್ಣಿನ
ಕಟ್ಟಡ, ಉಪಮೆ
ಅಲಂಕಾರವು ಚಪ್ಪರ
ಚಮತ್ಕಾರವಲ್ಲವದು
ನಿಶ್ಯಬ್ದದೊಳಗಣ ಶಬ್ದವದು
ರೂಪ ಸ್ಪರ್ಶ ರಸ ಗಂಧ ಮೇಳೈಸಿ
ಪರಿಮಳಿಸಿ ಹೂವರಳಿದಂತೆ…

‍ಲೇಖಕರು avadhi

23 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading