‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ

ಕನಾ೯ಟಕ ಸರಕಾರವು ಇತ್ತೀಚೆಗೆ ರಚಿಸಿದ ಡಾ ಎಂ ಎಂ ಕಲಬುಗಿ೯ ಟ್ರಸ್ಟ್ ನ ಪ್ರಥಮ ಅಧ್ಯಕ್ಷರಾಗಿ ನಾಡಿನ ಹೆಸರಾಂತ ವಚನ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬಸವಾನುಯಾಯಿಯಾಗಿರುವ ಡಾ. ವೀರಣ್ಣ ರಾಜೂರ ಅವರು ನೇಮಕಗೊಂಡಿರುವದು ಸಂತಸದ ಸಂಗತಿ. ಡಾ ವೀರಣ್ಣ ರಾಜೂರ ನಿಗವಿ೯, ನಿಷ್ಣಾತ ವಚನ ವಿದ್ವಾಂಸ ಮತ್ತು ಮೂರು ಶತಮಾನಗಳಿಗೂ ಅಧಿಕ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕಾಯ೯ನಿವ೯ಹಿಸಿ ವಿದ್ಯಾಥಿ೯ ಸಮೂಹ, ಸಹಚಿಂತಕರು, ಸಂಶೋಧಕರು ಮತ್ತು ಜನಸಮುದಾಯದ ‌ಮನ್ನಣೆ ಗಳಿಸಿದವರು.

ಡಾ. ಕಲಬುಗಿ೯ಯವರೊಂದಿಗೆ ನಾಲ್ಕು ದಶಕಗಳಿಗೂ ಅಧಿಕ ಕಾಲ ಒಡನಾಟ ಹೊಂದಿದ್ದ ಡಾ ರಾಜೂರ ಅವರನ್ನು ಈ ಟ್ರಸ್ಟ್ ಗೆ ಸರಕಾರ ನೇಮಕ ಮಾಡಿದ್ದು ಸ್ತುತ್ಯಾಹ೯ವಾಗಿದೆ. ಡಾ. ಕಲಬುಗಿ೯ಯವರ ಸಂಶೋಧನಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮತ್ತು ಅದನ್ನು ಸಮಾಜಮುಖಿಯಾಗಿ ಕ್ರಿಯಾಯಾಶೀಲವಾಗಿ ಬಳಸಿ ಸಮ ಸಮಾಜ ನಿಮಿ೯ಸುವ ನಿಟ್ಟಿನಲ್ಲಿ ಕಾಯ೯ ನಿವ೯ಹಿಸುವ ಸಕಲ ಸಾಮಥ್ಯ೯ವನ್ನು ಡಾ. ರಾಜೂರ ಹೊಂದಿದ್ದಾರೆ.

ಅತ್ಯಂತ ಸರಳ ಸಜ್ಜನಿಕೆಯ ಸ್ವಭಾವದ ಡಾ ರಾಜೂರ ಅವರು ವಿವಾದಾತೀತರು, ಸ್ಪಷ್ಟೋಕ್ತಿ ಗೆ ಹೆಸರಾದವರು ಮತ್ತು ತಮ್ಮ

ವಿವೇಚನೆಗೆ ಸರಿ ಎಂದದ್ದನ್ನು ಪ್ರತಿಪಾದಿಸುವ ಗುಣ ಸ್ವಭಾದವರು. ಅವರು ಯಾರ ಮುಲಾಜಿಗುವ ಒಳಗಾಗದ ಸ್ವಭಾವದವರಾದ್ದರಿಂದ ಅವರ ವಿದ್ವತ್ತು ಮತ್ತು ಸಂಶೋಧನಾ ಸಾಮಥ್ಯ೯ವನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಹತ್ತು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಪ್ರಶಸ್ತಿಗಳಿಗೆ ಮತ್ತು ಸ್ಥಾನಮಾನಗಳಿಗೆ ಎಂದೂ ಲಾಬಿ ಮಾಡದೇ ತಮ್ಮ ಕಾಯಕವನ್ನು ಶ್ರದ್ಧೆಯಿಂದ ಬಸವ ತತ್ವಗಳನ್ವಯ ಮಾಡಿ ಸಾಧಿಸಿ ಅವಕು ತೋರಿಸಿದ್ದಾರೆ. ಅವರ ವ್ಯಕ್ತಿತ್ವ ಅನುಕರಣೀಯ.

ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.

ಅವರೊಂದಿಗೆ ಈ ಟ್ರಸ್ಟ್ ಗೆ ನೇಮಕವಾದ ಹಿರಿಯ ಹೋರಾಟಗಾರ ,ಕಲಬುಗಿ೯ಯವರ ಶಿಷ್ಯ ಮತ್ತು ಹೊಸತು ಪತ್ರಿಕೆಯ ಸಂಪಾದಕ ಕಾ. ಡಾ. ಸಿದ್ದನಗೌಡ, ಕಲಬುಗಿ೯ಸರ್ ನಿಕಟವತಿ೯ ಅವರ ಸಂಶೋದ್ದನೆಗಳಿದೆ ಸದಾ ಕಾಲ ನೇರವು ನೀಡುತ್ತಿದ್ದ ಡಾ ಹನಮಂತ ಮೇಲಿನಮನಿ, ಧಾರವಾಡದ ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಂಶುಪಾಲರು ಮತ್ತು ಸಮ ಸಮಾಜ ಪರಿಕಲ್ಪನೆಯಲ್ಲಿ ನಂಬಿಕ ಇಟ್ಟು ಬಸವಾದಿ ಶರಣರ ತತ್ವಗಳನ್ವಯ ಕಾಯಕಶೀಲರಾದ ಡಾ ಶಶಿಧರ ತೋಡಕರ, ಹೆಸರಾಂತ ಸಂಶೋದಕಿ ಡಾ.ಹನುಮಾಕ್ಷಿ ಗೋಗಿ, ಸಂಶೋಧಕರು ಮತ್ತು ಹೆಸರಾಂತ ಪ್ರಾಧ್ಯಾಪಕರಾದ ಡಾ. ಬಾಳಣ್ಣ ಸೀಗಿಹಳ್ಳಿ, ಮತ್ತು ಡಾ ಚಂದ್ರಶೇಖರ ವಸ್ತ್ರದ ಅವರು ನೇಮಕಗೊಂಡದ್ದು ಸಂತಸದ ಸಂಗತಿ. ಅವರೆಲ್ಲರಿಗೂ ಅಭಿನಂದನೆಗಳು.

-ಸದಾಶಿವ ಮರ್ಜಿ

‍ಲೇಖಕರು avadhi

November 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: