ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ

ಸತ್ಯಪ್ರಕಾಶ್ ರಾಮಯ್ಯ

ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ

ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು

ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ ಘಾಸಿಗೊಂಡಿತು ಹುಸಿಕನಸು

ನಡುರಾತ್ರಿಯ ಕನಸು ಮೈಸವರಿ‌ ಹೋದ ಕ್ಷಣ ಗಾಳಿಯಲಿ ಬೆರೆತು ಹೋಯಿತು ಬೆವರ ಘಮಲು

ಯಾವ ನೋವೋ ಏನೋ ಹೊಕ್ಕುಳ ಹೂವ ಹುಡುಕಾಟದಲಿ ಕರಗಿಹೋಯಿತು ನೆರಳು 

ದಟ್ಟ ಕೂದಲ ಕತ್ತಲೊಳಗೆ ಬ್ರಹ್ಮಾಂಡವನೇ ಸೃಷ್ಟಿಸಿತು ಎದೆಯ ಬಾಂದಳದ ಚಿಟ್ಟೆ

ಅನಿಶ್ಚಿತತೆಯ ಆತ್ಮಕೆ‌‌ ಮುಲಾಮು ಹಚ್ಚಿದ

ಕೈಗಳ ಸ್ಪರ್ಷಕೆ ಮೆತ್ತಗಾಯಿತು ಪೂರ್ವಸೂರಿಯ ರಟ್ಟೆ! 

ವಿಧಿಯ ಹಳಿಗಳ ಸರಳ‌ ರೇಖೆಗಳನು ಬೆಸೆಯಲು ಬೆಳಕಿಗಾಗಿ ಇನ್ನೂ ಕಾಯುತ್ತಲೇ ಇದೆ ಮಿಂಚುಹುಳ

ಈ ಎಲ್ಲ ಭ್ರಮೆಗಳ ನಡುವೆ ಕನಸಿನ ಗೋಪುರಕೆ

ನೀರೆರೆಯುವ ಕೈಗಳನರುಸುತ್ತಲೇ ಇದೆ ಜೀವಜಲ! 

‍ಲೇಖಕರು avadhi

17 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading