ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ- ಜೀವ – ಭಾವ!

ಸಂಘಮಿತ್ರೆ ನಾಗರಘಟ್ಟ​​

ಅವನ ನೆರಳ ನಿರಾಕರಿಸಿ,
ನೆಡೆಯೋಣವೆಂದು…
ಬಿರುಸಿನಲಿ ಹೆಜ್ಜೆ ಇಡಲು
ಮುಂದಾದೆ,…ಆಗಲಿಲ್ಲ..
ನನ್ನದೊಂದು ಪಾದವೇ
ಅವನ ಅಂಗೈಯ ಆಸರೆಯಲ್ಲಿತ್ತು..
ಊರಿದ ಪಾದವ ಸರಿಸಲಾಗಲಿಲ್ಲ..
ಅವನಿಗೂ ನನ್ನ ಕದಲಿ


ಚಲಿಸಲಾಗಲಿಲ್ಲ.
ಇಬ್ಬರೂ ದಂಗಾಗಿ
ನಿಂತೆವು,.
ಅವನು ನನ್ನ ಪಾದವ
ಮೆಲ್ಲನೆ ಜೋಡಿಸಿದ,
ತಟ್ಟಾಡುತ್ತಿದ್ದ ನಾನು-
ಮೆಲ್ಲನೆ ಅವನ,.
ಅಂಗೈಯಲಿ ನನ್ನ ಕೈಗಳ
ಇರಿಸಿ…ಜೊತೆನೆಡೆದೆ…

‍ಲೇಖಕರು Avadhi

1 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading