ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿಷ್ಯನ ಕಣ್ಣಲ್ಲಿ ಎಸ್ ವಿ ಪಿ ಎಂಬ ಗುರು

ಇಂದು ಮಂಗಳೂರಿನಲ್ಲಿ ಎಸ್ ವಿ ಪಿ ಪ್ರಶಸ್ತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕರಾದ ಟಿಪಿ ಅಶೋಕ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ವಿ ಪಿ ಯವರ ಪ್ರೀತಿಯ ಶಿಷ್ಯನಾಗಿ ನನ್ನ ಆತ್ಮೀಯ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
೧೯೬೮ರ ಜುಲೈ :ಹನಿ ಕಡಿಯದೇ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ ನಿವ್ರುತ್ತರಾಗಲಿಲ್ಲ. ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು  ಸಾಹಿತ್ಯ , ಬದುಕು ಸಂಸ್ಕೃತಿ.
ಪೂರ್ಣ ಓದಿಗೆ ಭೇಟಿ ಕೊಡಿ: ಬಿ ಎ ವಿವೇಕ ರೈ

‍ಲೇಖಕರು avadhi

26 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading