ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೇಮ ಸಂಕೋಲೆ…

ಶಂಕರಾನಂದ ಹೆಬ್ಬಾಳ

ಗೀರಿದ ಕಡ್ಡಿಯ ತುದಿಯಲ್ಲಿ
ಒಲವು ಸುಟ್ಟು ಬೂದಿಯಾಗಿದೆ
ಬೊಗಸೆ ಕಣ್ಣಿನ ಚಂದ್ರ
ಬೆಳಕಿಗೆ ಬಾರದೆ ಮೋಡದಿ
ಅಡಗಿದ್ದಾನೆ…..
ಅವನೋ ಸ್ವಲ್ಪ
ಹುಂಬತನದ ಬುದ್ದಿಯಲಿ
ನಿನ್ನಂತಾಗಿದ್ದಾನೆ…..

ನಿಜ….
ನನ್ನೆದೆಯ ಕಪಾಟಿನಲ್ಲಿ
ನಿನ್ನ ಹೆಸರು ಅಳಿಸಿದೆ..!
ಹೃದಯದ ರಿಜಿಸ್ಟರಿನಲ್ಲಿ
ಗೈರು ಹಾಜರಿ ಪದೆಪದೆ..!

ಮುಗ್ದ ಮುಖದ ಭಾವಕ್ಕೆ
ಮೂಗುತಿ ಅಂದ
ಒನಪಿನ ಕದಪು
ಹುರುಪು ತರಲಿಲ್ಲ…..!
ಪ್ರೇಮದ ಸಂಕೋಲೆಯಲ್ಲಿ
ಈ ಜೀವನದ ದಾರಿ
ಸುಖ ಕಾಣಲಿಲ್ಲ…!

‍ಲೇಖಕರು Admin

3 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading