ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ – ಈಗ ಇರದ ಅದು…

ವಿಶ್ವನಾಥ ಎನ್ ನೇರಳಕಟ್ಟೆ

ಆಗ ಇತ್ತು, ಈಗಿಲ್ಲ
ನಮಗೇನು ನೋವಿಲ್ಲ

ಇದ್ದರಲ್ಲವೇ ಕರುಳು
ಮಿಡಿಯುವುದು ಒಡಲು
ಕರುಳು ಕಳಕೊಂಡವರಿಗೆ
ಬೇನೆ ಇಲ್ಲವು ಕಾಡಲು

ಹೇಳಬೇಕಾದ್ದನ್ನು ಹೇಳುವವರ
ಮನಸ್ಸಲ್ಲಿ ಮೋಹಪಾಶದ ಸಲುಗೆ
ಮೆಟ್ಟಿ ಕೊಂದವರ ಕಣ್ಣಲ್ಲಿ
ಗಾಢಾಂಧಕಾರದ ಹೊಗೆ

ಅದರಷ್ಟಕ್ಕೇ ಇತ್ತದು
ಬಂದವರಾರೋ, ಕೊಂದವರಾರೋ
ಋಣ ಮುಗಿಯಿತೆಂದುಕೊಂಡು
ಸುಮ್ಮನಾದೆವು ಕೊಲೆಯೊಂದನ್ನು ಕಂಡು

ಉಳಿಸಬಹುದಿತ್ತೇನೋ ಅದನ್ನು
ಮೊದಲೇ ಮನಸ್ಸು ಮಾಡಿದ್ದರೆ
ಮನಸ್ಸು ಮಾಡುವ ಮನಸ್ಸು
ನಮಗೆಲ್ಲಿದೆ ಹೇಳಿ?

‍ಲೇಖಕರು Admin

30 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading