ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸಂತನ ಹರೆಯ ಕೆರಳಿದೆ..

ಉದ್ರೇಕಗೊಂಡ ವಸಂತ

ಭುವನಾ ಹಿರೇಮಠ

ಯುಗವೆಂದರೆ ಒಂದು ವಸಂತವೊ
ವಸಂತಗಳ ಗುಚ್ಛವೊ
ನನ್ನ ಅಳತೆಗೆ ಸಿಗದ ಯುಗವೊ ವಸಂತವೊ
ಕಳೆದು ಹೋಗಿದೆ
ಆ ಕುರುಡು ಸೌಂದರ್ಯದಲಿ
ವಸಂತನೂ ಕಳೆದು ಹೋದಂತೆ

ಯಾವುದೂ ದೂರ ಸರಿಯುದಿಲ್ಲ
ಅಂತರದ ವ್ಯಾಖ್ಯಾನ ತಪ್ಪುವುದು
ಹತ್ತಿರಗೊಳ್ಳುವ ಅಂತರದಿಂದಲೆ
ಕಲ್ಪಿತ ಹಕ್ಕಿಯ ಹಾಡು
ಆಗಸದಿ ನಕಲಾದರೇನು
ರಾಗ ಮರೆಯದ ಅದೇ ಹಕ್ಕಿ
ಮುಂದಿನ ವಸಂತವನ್ನೂ
ಬರಮಾಡಿಕೊಳ್ಳದೇ

ಮೈತುಂಬ ಹೂ ಮುಡಿವ
ಒಂದಾನೊಂದು ಋತುವಿನ
ಬರಡು ಬೊಡ್ಡೆ
ಗೆಲ್ಲುಗಳ ಬಗಲಿಗೆ ಕಚಗುಳಿ
ಅದೇ ಚಿಗುರು ಮೀಸೆಯ
ವಸಂತನ ಹರೆಯ ಕೆರಳಿದೆ

ಮಿಡಿ ಮೊಲೆಗಳೆಲ್ಲ
ಬಲಿತ ಹಸುರಿಗೆ
ಎಳಸು ಹುಳಿ ಒಗರಿಗೆ
ಚೂರೆ ಚೂರು ಉಪ್ಪು ಖಾರ
ಚಿಟಿಕೆ ಹಿಂಗು
ಸಿಡಿದ ಸಾಸಿವೆ
ಲಟಗುಡುವ ತುದಿನಾಲಿಗೆಗೆ
ಉಪ್ಪಿನ ಕಾಯಿ
ಉದ್ರೇಕಗೊಂಡ ವಸಂತ
ಕಿಚ್ಚಿಡುವ ಕಣ್ಣೋಟ
ಅಳತೆಗೆ ಸಿಗನು ತೆಕ್ಕೆಗೂ

‍ಲೇಖಕರು avadhi

2 April, 2018

2 Comments

  1. Chidambar Nanavate

    Sister Bhuvana, the poem is so nyc and very meaningful too…! Congratulations

  2. Nasrin

    Nice….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading