ಲಕ್ಷ್ಮಿ ಕೆ ಬಿ
ದಿನೇ ದಿನೇ
ಮರೆವಿನ ಕಾಯಿಲೆ
ಅಧಿಕವಾಗುತ್ತಾ ಇದೆ.
ಈ ಕಾಯಿಲೆಯಿಂದ
ಏನನ್ನ, ಯಾರನ್ನ,
ಯಾವಾಗ ಬೇಕಾದರೂ, ಮರೆತುಹೋಗಬಹುದು ನಾನು.
ಇನ್ನೂ ನನ್ನ ಕಣಕಣದಲ್ಲಿ
ಹರಿಯುತ್ತಿರೋ ನೆತ್ತರಿನಲ್ಲಿ
ಬೆರೆತುಹೋಗಿರೋ ನಿನ್ನನ್ನೂ?
ಮರೆತುಹೋಗದಿದ್ರೆ ಸಾಕು.

ಇದು ನನ್ನ ಕ್ಷಣ ಕ್ಷಣದ,
ಕಣಕಣದ ಪ್ರಾರ್ಥನೆ.
ಒಂದು ವೇಳೆ
ನಾನು ನಿನ್ನನ್ನು
ಮರೆತು ಹೋದೆ
ಅಂತ ಆದ್ರೆ,
ನಿನಗೆ ನೆನಪಿರಲಿ
ಅದು ನನ್ನ ತಪ್ಪಲ್ಲ
ನನಗಿರೋ ಕಾಯಿಲೆಯ ತಪ್ಪು.
ಹಾಗೆ ನನ್ನನ್ನು ಕ್ಷಮಿಸೋ
ವಿಶಾಲ ಹೃದಯ
ನಿನ್ನದಾಗಲಿ,
ನನ್ನನ್ನು ಇಂದಿನಂತಿಯೇ
ನೋಡಿಕೊಳ್ಳೋ ಉದಾತ್ತ ಪ್ರೀತಿ ಮರೆತುಹೋಗದಿರಲಿ…
ಇಂತಿ ನಿನ್ನ ಪ್ರೀತಿಯ,
ಒಲವು






0 Comments