ಚಿಂತಾಮಣಿ ಕೊಡ್ಲೆಕೆರೆ
ಪ್ರೀತಿಸುವೆ ಎನುವ ಮೂಢ-
ಅದರಾಳ ಮರೆಯಬೇಡ!
ಕಂಡ ಆ ಕ್ಷಣದಲ್ಲೆ ಪ್ರೀತಿ ಹುಟ್ಟಿತು ಎನುವೆ
ಹುಟ್ಟಲೂಬಹುದು ಗೆಳೆಯ
ಗಾಳಿಗೋಡುವ ಮೋಡ ಎತ್ತಲೋ ಸಾಗುವುದು
ತುಂಬುವುದೆ ನಮ್ಮ ಹೊಳೆಯ?

ಮನಸು ಹೊಯ್ದಾಡುವುದು ಹಾಯಿದೋಣಿಯ ರೀತಿ
ತಲುಪುವುದೆ ನಮ್ಮ ತೀರ?
ನೊರೆಗುಳ್ಳೆಗಳು ಎದ್ದು ಒಡೆಯುವವು ನೂರಾರು
ದೃಢಚಿತ್ತ ಪಾರಾವಾರ
ಒಳಗೆ ಪ್ರೀತಿಯನಿಟ್ಟು ಸಲಹು ನೆಮ್ಮದಿಯಲ್ಲಿ
ಆರದಿರಲದರ ಜ್ಯೋತಿ
ಮೈ ಮೋಹ ವ್ಯಾಮೋಹ ಅಂಗಾಂಗಗಳ ದಾಹ
ದಾಟಿರುವುದದರ ರೀತಿ
ಪ್ರೀತಿಸುವಿ ಎನುವ ಮಿತ್ರ
ಇವು ಎರಡು ಮಾತು ಮಾತ್ರ






0 Comments