ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕೀಯ ಕುಸಿಯಲಿದೆಯೆಂದಾಗೆಲ್ಲ ಸಾಹಿತ್ಯ ಅದನ್ನು ತಡೆಯುತ್ತದೆ..

ಹಸನ್ ನಯೀಮ್ ಸುರಕೋಡ 

ಇದು ೧೯೫೫ರ ಮಾತು.

ದೆಹಲಿಯ ಕೆಂಪುಕೋಟೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಮುಖ್ಯ ಅತಿಥಿಯಾಗಿದ್ದರು.

ಸಂಪ್ರದಾಯದಂತೆ ಹಿಂದಿಯ ರಾಷ್ಟ್ರಕವಿ ರಾಮಧಾರಿಸಿಂಹ ದಿನಕರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಹತ್ತುವಾಗ ನೆಹರೂ ಜೋಲಿ ತಪ್ಪಿ ಇನ್ನೇನು ಕೆಳಗೆ ಬೀಳಲಿದ್ದರು.

ಅಷ್ಟರಲ್ಲಿ ಅವರ ಹಿಂದೆಯೆ ಇದ್ದ ಕವಿ ದಿನಕರ ಅವರನ್ನು ಬೀಳದಂತೆ ಹಿಡಿದುಕೊಂಡರು.

ವೇದಿಕೆ ಮೇಲೆ ಕುಳಿತುಕೊಂಡ ಮೇಲೆ ಪ್ರಧಾನಿ ‘ಧನ್ಯವಾದ ಕವಿಗಳೇ. ತಾವು ನನ್ನನ್ನು ಹಿಡಿದುಕೊಂಡಿರದಿದ್ದರೆ ನಾನು ಬಿದ್ದೇ ಬಿಡುತ್ತಿದ್ದೆ.’ ಎಂದರು.

‘ಅದಕ್ಕೇಕೆ ಧನ್ಯವಾದ ಹೇಳುವಿರಿ ಪಂಡಿತಜೀ. ರಾಜಕೀಯ ಕುಸಿಯಲಿದೆಯೆಂದಾಗೆಲ್ಲ ಸಾಹಿತ್ಯ ಅದನ್ನು ತಡೆಯುತ್ತದೆ, ತಡೆಯಬೇಕು ಅಷ್ಟೇ.’ ಎಂದರಂತೆ ಆ ಮಹಾಕವಿ ದಿನಕರಜೀ.

ಆ ರಾಜಕಾರಣಿ ಆ ಸಾಹಿತಿಗಳ ಕಾಲವೊಂದಿತ್ತು ಎಂಬುದು ಹಳವಂಡ ಮಾತ್ರವಾಗಬಾರದು, ಅಲ್ಲವೆ?

‍ಲೇಖಕರು avadhi

31 July, 2020

1 Comment

  1. Vasundhara K M

    ಅಸೂಕ್ಮತೆಯ ಕಾಲಮಾನವಿದು. ಹಾಸ್ಯ, ವಿಡಂಬನೆಗಳು ಮೊನಚು ಕಳೆದುಕೊಳ್ಳುತ್ತಿವೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading