ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊಹಂಜೋದಾರೋ ನರ್ತಕಿಯರು 

ಪ್ರತಿಭಾ ನಂದಕುಮಾರ್

ಒಬ್ಬಳು ಇಲ್ಲಿ

ಇನ್ನೊಬ್ಬಳು ಅಲ್ಲಿ

ಇವಳು ನಗ್ನ ನರ್ತಕಿ

ಸೊಂಟದ ಮೇಲೆ ಕೈ ಇಟ್ಟು

ಒಂದು ಕಾಲು ಮುಂದಿಟ್ಟು 

ಏನು ಗರ್ವ ಭಂಗಿಯಲ್ಲಿ

ಅದರ ಪ್ರತಿಕೃತಿಗೆ ದೊಡ್ಡವರು

ಗಾಡಿ ಗುಲಾಬಿ ರಂಗು ಬಳಿದು

ಉಡುಗೆಯಿಂದ ಮುಚ್ಚಿ ಮಂಡಿ

ಮುಚ್ಚಿ ಪೀಚಲು ಎದೆ ಚಪ್ಪಟೆ ಕುಂಡಿ

ಬಿಗಿದರು ಸಂಸ್ಕೃತಿ ರಕ್ಷಕರು

ಪಾಕಿಸ್ತಾನದಲ್ಲೊಬ್ಬಳು ಇವಳ ತಂಗಿ

ಕರಾಚಿಯಲ್ಲಿ ಕೈದಾಗಿ ನೆಟ್ಟಗೆ ನಿಂತಿದ್ದಾಳೆ

ಅವಳೂ ನಗ್ನ ನೃತ್ಯದಲ್ಲಿ ಮಗ್ನ ಆದರೆ

ಬುರ್ಖಾ ತೊಡಿಸಿ ಮುಚ್ಚಿಟ್ಟುಬಿಟ್ಟಿದ್ದಾರೆ

ಈಗ ಭಾರತ ಪಾಕಿಸ್ತಾನದ ನಡುವೆ ಜಗಳ

ನಗ್ನ ನರ್ತಕಿ ನಮ್ಮವಳು ನಮ್ಮವಳು

ಇಬ್ಬರಿಗೂ ಬೇಕವಳು ಯಾತಕೆ ಯಾತಕೆ

ಎರಡು ಸಾವಿರ ವರ್ಷದ ಮಾನ ಉಳಿಸಕ್ಕೆ 

ಅಲ್ಲ …. ನಿಜಕ್ಕೂ ಕಳಿಯಕ್ಕೆ

‍ಲೇಖಕರು avadhi

24 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading