ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಗಾರು ಜೋರಾಗಿದೆ..

ಸಿಂಧು ಭಾರ್ಗವ್

ಅಂಗಳದಿ ಮುಂಗಾರು ಆರ್ಭಟಿಸುತಿದೆ
ಹಪ್ಪಳ ಸೆಂಡಿಗೆಯ ಸದ್ದು ಜೋರಾಗಿದೆ.
ಮಿಡಿಮಾವಿನಕಾಯಿ ಬಿಸಿಬಿಸಿ ಗಂಜಿಗೆ
ಭರಣಿಯು ಮಾಡಿಯಿಂದ ಕೆಳಗಿಳಿದಿದೆ.

ಕಪ್ಪೆ ಲಾಂಧ್ರಗಳು ರಸ್ತೆ ತುಂಬಾ ಓಡಾಡುತಿವೆ
ವಾಹನಗಳ ಗಾಲಿಗೆ ಸಿಲುಕಿ ಸಾಯುತಲಿವೆ
ಗುಡುಗು ಸಿಡಿಲಿಗೆ ಮರಿ ಬೆಕ್ಕು ಹೆದರಿ
ನಾಯಿಮರಿ ಗೋಣಿಮೇಲೆ ಮುದುಡಿ‌ ಮಲಗಿದೆ.

ನೆರೆಬಂದು ಮನೆಯೊಳಗೆ ಕಟ್ಟಿ ಹಾಕಿದಂತಾಗಿದೆ
ಶಾಲಾ-ಕಾಲೇಜಿಗೆ ರಜೆ ಸಿಕ್ಕಿದೆ.
ಆಟಪಾಠಕೆ ಎಲ್ಲ ಸಜೆ ಸಿಕ್ಕ ಮೇಲೆ
ಮೇಷ್ಟರು ಮಕ್ಕಳು ಗೊಣಗುವ ಹಾಗಾಗಿದೆ.

ಮುಂಗಾರು ಬಂದಿದೆ ರೈತರಲಿ ಸಂತಸವ ತಂದಿದೆ‌
ಒಣಗಿದ ಪಾಚಿಗೆ ಜೀವಕಳೆ ಬಂದಿದೆ.
ಹೊಸ ಹಸಿರು ಹೂಗಳು ಉಲ್ಲಾಸಗೊಂಡಿವೆ.
ನವಿಲಿನ ನರ್ತನ ಜೋರಾಗಿ ನಡೆದಿದೆ.

ವರುಷದ ಮೊದಲಹಬ್ಬ ನಾರಗ ಪಂಚಮಿಗೆ
ಅಕ್ಕತಂಗಿಯರೆಲ್ಲ ಸ್ವಾಗತ ಕೋರಿಹೆ,
ಅಣಬೆ- ಕಳಲೆಗಳು ಮೊಳಕೆಯೊಡೆದು
ಸವಿಯಲು ರುಚಿಕರ ಖಾದ್ಯವಾಗಿವೆ.

ಅರಸಿನ, ಗೆಜ್ಜೆ ವಸ್ತ್ರ ನಾಗಮ್ಮನ ಪೂಜೆಗೆ
ಕಾಯಿಕಡುಬು ಚಿಗಳಿ ನೈವೇದ್ಯಕ್ಕೆ ನಿಂತಿವೆ.
ಹೊಸಬಟ್ಟೆ ಧರಿಸಿ ಮಳೆಯಲಿ‌ ನೆನೆದು
ಹಬ್ಬವ ಆಚರಿಸಲು ಮನ ಕಾತುರಗೊಂಡಿದೆ.

‍ಲೇಖಕರು avadhi

22 June, 2019

1 Comment

  1. T S SHRAVANA KUMARI

    ಮಳೆಯ ಹಾಡು ಸೊಗಸಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading