ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಂಚಿನಾ ಗೆರೆಯೊಂದು..

ದೂರ  ತೀರದ  ಕರೆ

sarojini_padasalagi-249x300

ಸರೋಜಿನಿ  ಪಡಸಲಗಿ

ದೂರದಲ್ಲೊಂದು  ತೀರ  ಕರೆಯುತಿರುವಂತಿದೆ
ಎಂಥದೀ  ಥಳುಕು  ಯಾವುದೀ  ಬೆಳಕು
ಮಿಂಚಿನಾ  ಗೆರೆಯೊಂದು  ಇರುಳ  ಸೀಳುವಂತಿದೆ

ಮನದಲೊಂದು  ಚಡಪಡಿಕೆ ಅರಿವಲೊಂದು  ಕಳವಳಿಕೆ
ಎದೆಯ ಆಳ ತುಂಬಾ  ತುಡಿಯುತಿರುವ ಬಯಕೆ
ಕೈ ಬೀಸಿ  ಕರೆವ  ತೀರ  ಸೇರಲೊಂದು  ಕನವರಿಕೆ
ತಡೆಯಲಾರದಾ ಭಾರಕೆ  ಜೀವ  ತುಂಬ  ನರಳಿಕೆ

ಅರಿಯದ  ತೀರದ  ಕಾಣದಿಹ  ದಾರಿ
ಹೆಜ್ಜೆ  ಗುರುತೊಂದು ಇರದ ಬೆರಗ  ಮೂಡಿಸೋ ದಾರಿ
ಭೋರ್ಗರೆವ  ಕಡಲ ದಾಟುವುದದಾವ ಪರಿ
ಸೇರಲಾರೆನೇನೊ ತೀರಾ ಹೇಳು ಒಂದು ಬಾರಿ

ಚಿತ್ತ  ತುಂಬ  ತುಂಬಿದ  ಕತ್ತಲದಿ  ನುಸುಳಿ
ಅಲ್ಲಿ  ಅರಳಿದೆ ಮತ್ತೆ  ಹೊಸ  ಆಸೆ  ಹೊರಳಿ
ಈಜಲೋ  ಹಾರಲೋ  ಬೇಕೆ  ನಿನಗೆ  ಸುಳಿವು
ನಿನ್ನ  ಆಶೆಯಾ  ದೀಪ  ನೀಡಲಾರದೆ  ಹೊಳವು

‍ಲೇಖಕರು Admin

21 November, 2016

1 Comment

  1. shrivatsadesai

    Beautiful!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading