ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧವ ಬರಲಿಲ್ಲ…..

ಒಂದು ಕವಿತೆ

ದಯಾನಂದ್

ಮಾಧವ ಬರಲಿಲ್ಲ
ತಡವಿಕೊಳ್ಳುತ್ತಾ ನಡೆದಿತ್ತು
ಕಾಲ
ಅಕಾಲದಲ್ಲಿ ಮರೆತ
ಮೂರೂಮುಕ್ಕಾಲು ಪಾವು
ಮುತ್ತುಗಳ ಪೋಣಿಸುವ
ಮುತ್ತಿನ ಸರದ ಹುಡುಗಿಯರ
ಸಾವಿನ ಸಂಕಟಕ್ಕೆ;
ಅವರದಾರಿಯಲ್ಲಿ
ಮುತ್ತೇ ಮುತ್ತು.
 
ಗೋಕುಲದಲ್ಲಿ ನಡೆಯಲಿಲ್ಲ
ಸಾವಿರ ಸೂಳೆಯರ
ಸತ್ಯಾಗ್ರಹ ಡೌಲು
ಉಪವಾಸ ಕುಂತು
ಬಿಸ್ಕೆಟ್ಟು, ಬೋಮರ್ೀಟಗಳ ತೇಗಲ್ಲಿ
ಸೆರಗ ಬಿಚ್ಚಿ
ಬಟಾಬಯಲಿಗೆ
ಕುಂತ ಕಾಮಿನಿಯರ ಕೂಗು
ಯಮುನೆಯಲ್ಲಿ ನೆನೆಯಲಿಲ್ಲ;
ವದ್ದೆಯಾಗಲಿಲ್ಲ..,
ಮಾಧವ ಬರಲಿಲ್ಲ.
 
ಮುತ್ತಿನ ಹುಡುಗಿಯರ
ಕೊಂಡುಹೋದ ಸಮುದ್ರ,
ಸತ್ಯಾಗ್ರಹಿ ಸೂಳೆಯರ
ನುಂಗಿದ ಸಮುದ್ರ
ಮುಳುಗಿಸಿತ್ತು ದ್ವಾರಕೆಯ
ಮಾಧವ ಹೋದ ಮೇಲೆ,
ಯಮುನೆಯಂತೂ ಹರಿಯುತ್ತಿದ್ದಾಳೆ
ಅದೇ ಪ್ರಶಾಂತದಲ್ಲಿ,
ದಂಡೆ ಕಾದಿದೆ ಉಬ್ಬರಕ್ಕೆ
 

‍ಲೇಖಕರು avadhi

8 October, 2013

1 Comment

  1. mmshaik

    nice very nice..sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading