ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತೇನೂ ಬೇಡ..

ನಾಲ್ಕು ಹೆಜ್ಜೆಯ ಪಯಣ

shreedevi keremane

ಶ್ರೀದೇವಿ ಕೆರೆಮನೆ 

heಮಾತೇನೂ ಬೇಡ, ನಾಲ್ಕೇ ನಾಲ್ಕು ಹೆಜ್ಜೆಯ ಪಯಣ
ಕೈ ಕೈ ಹಿಡಿದು ಜೊತೆಯಾಗಿ ನಡೆದು ಬಿಡೋಣ.

ನೀನು ಕೋಪದಿಂದ ಮುಖ ತಿರುವಿದರೂ ಆದೀತು
ಜೊತೆ ಜೊತೆಗೆ ಹೆಜ್ಜೆಯಿಟ್ಟು ತೇರು ಎಳೆದು ಬಿಡೋಣ.

ನಿನ್ನ ಸನಿಹದಲ್ಲಿ ಯಾವುದೋ ಮಾದಕ ಶಕ್ತಿಯಿದೆ
ಮಧು ಮಧುರ ಮಾರ್ಧವತೆಯ ಜೊತೆಯಲ್ಲಿಟ್ಟುಕೊಳ್ಳೋಣ.

ನೋವಿನ ದಿನಗಳ ನೆನಪನ್ನೆಲ್ಲ ಮರೆಗೆ ಸರಿಸಿ
ಮೆಲ್ಲ ಮೆಲ್ಲನೆ ಹೊಸದೊಂದು ಜೀವನ ಕಟ್ಟಿಕೊಳ್ಳೋಣ.

ಮಾತು-ಮುನಿಸು, ಪ್ರೀತಿ-ವಿರಹ ಏನಿದ್ದರೂ ಸರಿ
ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ‘ಸಿರಿ’ಯ ಹಂಚಿ ಉಣ್ಣೋಣ.

‍ಲೇಖಕರು Admin

15 September, 2016

2 Comments

  1. smitha

    Chennagide-smitha

  2. ರಮೇಶ್ ಹಿರೇಜಂಬೂರು

    ಪುಟ್ಟದಾದರೂ ಸರಿ ಚೊಕ್ಕಟವಾದ ಹಾಗೂ ಚಿತ್ರಕ್ಕೆ ಅಚ್ಚುಕಟ್ಟಾದ ಕವನ ಹೆಣೆದಿದ್ದೀರಿ ಶ್ರೀದೇವಿ. ಸೂಪರ್. ಎಂಥ ಸಮಯದಲ್ಲೂ ಪ್ರೀತಿ ಪ್ರೀತಿಯನ್ನಾಗಿ ಉಳಿಸಿಕೊಳ್ಳುವ ನಿಮ್ಮ ಹಂಬಲ ಪ್ರಸ್ತುತಾರ್ಹ…
    -ರಮೇಶ್ ಹಿರೇಜಂಬೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading