ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಮಾಯಿ….

ಡಾ ನಿರ್ಮಲಾ ಬಟ್ಟಲ

ತಾಯಿ
ನೀನು ಮಹಾಮಾಯಿ
ಅನಾಥ ಬಂಧು ಪ್ರೇಮಸಿಂಧು

ನಿನ್ನ ಹಸಿವ ನುಂಗಿ
ಸಾವಿರ ಮಕ್ಕಳಿಗಿ ತುತ್ತು ಹಾಕಿ
ಮುತ್ತು ನೀಡಿ ಅಪ್ಪಿಕೊಂಡಾಕಿ

ಆಸರೆಯಿಲ್ಲದ ಹೆಣ್ಣುಮಕ್ಕಳಿಗೆ
ತವರಿನ ಆಸರೆಯಾಗಿ
ಬದುಕುವ ದಾರಿ ತಿಳಿಸಿಕೊಟ್ಟಾಕಿ

ಬದುಕು ರೂಪಿಸಿ ಅನಾಥರನು
ಉತ್ತಮ ನಾಗರಿಕರನ್ನಾಗಿ ಮಾಡಿ
ಸಮಾಜಕ್ಕೆ ಉಡುಗರೆಯಾಗಿ ಕೊಟ್ಟಾಕಿ

ಕಷ್ಟನಷ್ಟ ಅವಮಾನಗಳೆನೆ ಉಂಡರು
ನಡೆವ ಹಾದಿಯ ಮುಳ್ಳುಗಳನೆ
ಹೂವುಗಳ ಮಾಡಿಕೊಂಡಾಕಿ

ಪದಕ ಪ್ರಶಸ್ತಿಗಳೆನೆ ಬಂದರು
ಬದಲಾದವಳಲ್ಲ ನೀನು ನೋವ ಮರೆಸಿ
ಮನದುಂಬಿ ನಕ್ಕಾಕಿ

ನೀ ಸಿಂಧೂರಶ್ಮಿಯಾಗಿ
ಮಮತೆಯ ಚೇತನವಾಗಿ
ಬುದ್ದ ಬಸವ ಸಾವಿತ್ರಿಯಂತಾದಾಕಿ

ಸಿಂಧೂತಾಯಿ ಸಕ್ಪಾಲ
ಮರೆಯಾಗುವವಳಲ್ಲ ನೀ
ಸೂರ್ಯ ಚಂದ್ರರಂತೆ ಬೆಳಕಾಗಿಕಿ

‍ಲೇಖಕರು Admin

6 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading