ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಅವರವರದೇ ಕತೆ..

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಸೂಜಿ ಮೊನೆಯಷ್ಟು ಜಾಗದಲ್ಲಿ
ಸಾಸಿವೆ ಬೆಳೆದು
ಹಳದಿ ಹೂವಿಗೆ
ನೀಲ ತುಂಬಿ ಮುತ್ತಿಕ್ಕಿ
ಬಲಿತ ಕಾಯಿಗಳು
ಬಿಸಿಲಿಗೊಗ್ಗರಣೆ ಹಾಕಿವೆ
ನೀನು ಹಬ್ಬಕ್ಕೆ ಬಂದಿರುವ ಸುದ್ದಿ
ಮೂಗಿಗೆ ರವಾನೆ

ಮೂಗಿನ ಕರಾಮತ್ತಿಗೆ
ಹತ್ತಿರವೇ ಇದ್ದ ಮೆದುಳಲ್ಲಿ
ಭೂತದ ಕೋಲ

ಕೂಗಿಗೆ ಮಾರ್ದನಿಸಲು
ದಟ್ಟ ಕಾಡಾಗಲೀ
ಬೆಟ್ಟದ ಕಣಿವೆಗಳಾಗಲೀ ಇಲ್ಲ

ಏನಿದ್ದರೂ
ಬಯಲ ಸೀಮೆಯಲ್ಲಿ
ಬಯಲ ಕೂಡಿ
ಬಯಲ ಕಳೆಯುವ ಲೆಕ್ಕ

ಹಾಗಾಗಿ
ವನವಾಸಕ್ಕೆಂದು
ಹಾಯುತ್ತಿದ್ದ ರಾಮನಿಗೆ
ಬಯಲಾಟದವರು
ರಾಮಾಯಣವನ್ನೇ
ಆಡಿ ತೋರಿರಬೇಕು
ಅಂತೆಯೇ
ಪಾಂಡವರಿಗೆ ಮಹಾಭಾರತವ

ಅವರ ಮುಂದೆ
ಅವರವರದೇ ಕತೆ

ಬಯಲ ಕನ್ನಡಿಯಲ್ಲಿ
ಸೀತೆ ದ್ರೌಪದಿ
ಬಿಟ್ಟು ಹೋದ
ಕಣ್ಣೀರಿನ ಕೊಳಗಳು
ಎತ್ತ ನೋಡಿದರೂ
ಬಿಸಿಲಲಿ ಮರೀಚಿಕೆಗಳು

‍ಲೇಖಕರು avadhi

26 May, 2023

1 Comment

  1. ಸಂಗೀತ ರವಿರಾಜ್

    ಕವಿತೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading