ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂತಕಾಲದ ಗುಳಿಕೆನ್ನೆ

ರಾಘವೇಂದ್ರ ದೇಶಪಾಂಡೆ

ಹುಡುಕುವೆ ನನ್ನನು ಅವರಿವರಲ್ಲಿ
ಸಿಗಬಹುದು ಹೂವಿನ ಗುಚ್ಛ
ಬರುವದೋ…! ನೆನಪು
ಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ

ನಡೆಯಬಹುದು ಕೆಲವೊಮ್ಮೆ ಹೀಗೂ
ಜೀವನ ಪರ್ಯಂತ ಸಂಬಂಧವು
ದೀರ್ಘವಾಗುವದು ಮಾತು…! ಸೇರಿದಾಗ ಸುದೀರ್ಘವಾಗುವುದು ನೆನಪು ಇಲ್ಲವೆಂದಾಗ

ಅಗತ್ಯವೆನಿಸಿದೆ ಛಾಯಾಚಿತ್ರಿಸುವದು
ಜೀವನದ ವಾಸ್ತವತೆಯಲಿ
ತೋರಿಸುವದಿಲ್ಲ ದರ್ಪಣ
ಭೂತಕಾಲದ ಚಿತ್ರಣವ…! ವಾಸ್ತವತೆ ತೋರಿಸುವಂತೆ

ಕೇಳುತಿಹರು ಯಾರೋ ಮಹಾನುಭಾವ
ಬದುಕಿನ‌ ಮೌಲ್ಯವೇನೆಂದು
ನೆನಪಾಗುತಿದೆ…!
ಗುಳಿಕೆನ್ನೆಯ ನಿನ್ನ ಮುಗುಳ್ನಗೆ

ಎಷ್ಟು ಸುಂದರವಾಗಿ ‌ಕಾಣುವದು‌
ಆ ಸಮಯದಲಿ ಬದುಕು
ನನ್ನವರಾರೋ…! ನೆನಪಾಗುತಿರುವೆ 
ನೀ ಎಂದು ಹೇಳಿದಾಗ

‍ಲೇಖಕರು Avadhi

24 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading