ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳದಿಂಗಳ ತೀರದಲಿ ಬೆನ್ನು ಬೆನ್ನಿಂಗಾತು ಕೂತು…

ಬಾ ಇಲ್ಲಿ ಕಣ್ಣ ತೇಲಿಬಿಡು

11745577_847279875355017_5425354530072624245_n-150x150

ರಾಜಕುಮಾರ ಮಡಿವಾಳರ್

2
ಬೆಳದಿಂಗಳ ತೀರದಲಿ ಬೆನ್ನು ಬೆನ್ನಿಂಗಾತು ಕೂತು,
ಒಂದೊಂದೇ ಚುಕ್ಕಿಯ ನೀರಿಗೆಸೆದದ್ದು ಹಳೆ ಮಾತು,
ಬಾ ಇಲ್ಲಿ ಕಣ್ಣ ತೇಲಿಬಿಡು
ನೆಲದ ಮೈ ಹರವು
ಬೆಳಗು ನದಿಯಲಿ…!
ಗುಬ್ಬಿ ಗುಲಾಬಿ, ಪಾರಿವಾಳ ಪಾರಿಜಾತ,
ಸಂಪಿಗೆ ಬಲು ಇಂಪಿನ ಕೋಗಿಲೆ,
ಮುಕುರುತಾವ ಮುಗಿಬಿದ್ದು
ಇಳಿಬಿಟ್ಟ ಕಾಲಿಗೆ,
ದಡದ ತುಂಬಾ ಧುಮ್ಮಿಕ್ಕುವ ಹಸಿರು!
ಬಳ್ಳಿ ತುದಿಯಲಿ ಬಣ್ಣ ಬಣ್ಣದ ಮೀನರಳಿ!
ಮಾತಾಡುತಾವ…
ಕಿವಿಯ ಎದೆ ತೆರೆದು ತುಂಬಿಕೊ ಜೀವ…
 

‍ಲೇಖಕರು G

23 September, 2015

2 Comments

  1. Bidaloti Ranganath

    ಕವಿತೆ ಭಾವನಾತ್ಮಕವಾಗಿ ಚನ್ನಾಗಿದೆ.

  2. prajna

    appata kavite. tumba chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading