ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ

ಪಾತರಗಿತ್ತಿ

uttam 32 (4 6)..1

ಹನುಮಂತ ಪಾಟೀಲ್

1
ಬಂತು ಪಾತರಗಿತ್ತಿ ಹೂಬನವ ಸುತ್ತಿ
ಗಿರಿ ಶಿಖರಗಳ ನೆತ್ತಿ ಹತ್ತಿ
ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ
ಬಂದೈತಿ ಇತ್ತ ಮುಂದಿನ ಪಯಣವೆತ್ತ ?
 
ರೇಶಿಮೆಯ ನುಣುಪಿನ ನವಿರಾದ ರೆಕ್ಕಿ
ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ
ವಿವಿಧ ವರ್ಣ ಸಂಯೋಜನಗೆಳ ಭಿತ್ತಿ
ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ
 
ಹೂವಿಂದ ಹೂವಿಗೆ ಹಾರುವ ಗಟ್ಟಿಗಿತ್ತಿ
ಚಂದುಳ್ಳಿ ಮನದ ಪಾತರಗಿತ್ತಿ
ಇಷ್ಟು ದಿನ ನೀನು ಎಲ್ಲಿದ್ದಿ ಸುಂದರಿ ?
ಇದ್ದಕಿದ್ದಂತೆ ಧರೆಯಲುದಿಸಿದ ಪರಿ !
 
ಹಾರುವೆಡೆಯಲ್ಲೆಲ್ಲ ಜಗದ ತುಂಬೆಲ್ಲ
ಚಿಲುಮೆಯುಕ್ಕಿಸುವ ಚೈತನ್ಯ ಜೀವಿ
ನೀನು ಸುತ್ತುವ ದಶ ದಿಕ್ಕುಗಳಲೆಲ್ಲ
ಜೀವನ ಸಂಕೇತವನೊಯ್ವ ಸಾಂಕೇತ ಜೀವಿ
 
ಚಣದ ನಶ್ವರ ಬದುಕು ನಿನ್ನದಾದರೂ
ಯುಗದ ಬಾಳೆಂಬಂತೆ ಬದುಕಿ
ಕಾಲನ ಕರೆಗೆ ಓಗೊಟ್ಟು ಕಾಣೆಯಾಗುವಾಕಿ
ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ
 

‍ಲೇಖಕರು G

September 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. lakshmikanth itnal

    ಹನುಮಂತ ಅನಂತ ಪಾಟೀಲ ರಿಗೆ ನಮಸ್ಕಾರ. ಕವಿತೆ ಚನ್ನಾಗಿದೆ, ಈ ಪಾತರಗಿತ್ತಿ ಒಂದು ರೀತಿಯಲ್ಲಿ ಬೇಂದ್ರೆ ಕಾಪಿ ರೈಟ್.
    ಚಣದ ನಶ್ವರ ಬದುಕು ನಿನ್ನದಾದರೂ, ಯುಗದ ಬಾಳೆಂಬಂತೆ ಬದುಕಿ
    ಕಾಲನ ಕರೆಗೆ ಓಗೊಟ್ಟು ಕಾಣೆಯಾಗುವಾಕಿಮ, ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ…ತೂಕದ ಸಾಲುಗಳು. ಬದುಕಿನ ಅರ್ಥವಂತಿಕೆಯನ್ನು ಸಾರುವ ಸಂಕೇತಶೀಲ ಬದುಕು ಈ ಪಾತರಗಿತ್ತಿಯದು.

    ಪ್ರತಿಕ್ರಿಯೆ
    • Hanumanth Ananth Patil

      ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ಅವದಿಯಲ್ಲಿನ ಎಲ್ಲರ ಎಲ್ಲ ಬರಹಗಳಿಗೆ ಓದುಗರ ಪ್ರತಿಕ್ರಿಯೆಗಳಿರಲಿ. ಓದುಗರ ಅಬಿವ್ಯಕ್ತಿಯೆ ಬರಹಗಾರರಿಗೆ ಸ್ಪೂರ್ತಿ.

      ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: