ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂದ ಕಾಲೂರು ಈ ಬೆಂಗಳೂರು

                                                                                             ಭಾಸ್ಕರ ಬಂಗೇರ

ಐಟಿ-ಬಿಟಿ ಕ್ರಾಂತಿಯ ಲಾಭದಲ್ಲಿ ಸಿಂಹಪಾಲನ್ನು ಪಡೆದುಕೊಂಡದ್ದು ನಮ್ಮ ಬೆಂಗಳೂರು. ಬ್ರಿಟಿಷರ ಜಾಗದಲ್ಲಿ ದೇಸಿ ಸೂಟುಬೂಟಿನ ಪಾಳೇಗಾರರು ತಮ್ಮ ವಸಾಹತುಗಳನ್ನು ಇಲ್ಲಿ ನಿರ್ಮಿಸಿಕೊಂಡರು. ಹೊರಗಿನಿಂದ ಬಂದವರಿಗೆ ತೊಂದರೆ ಆಗದಿರಲೆಂದು ತಲೆಮಾರುಗಳಿಂದ ನೆಲೆಸಿರುವವರನ್ನು ಒಕ್ಕಲೆಬ್ಬಿಸಿ, ಯಾರೋ ಕಷ್ಟ ಪಟ್ಟು ಬೆಳೆಸಿದ ಮರಗಳನ್ನು ಕಡಿದು ರಸ್ತೆ ಅಗಲ ಮಾಡಿದರು.

ಈ ನಾಡಿನ ಭೂರಹಿತರಿಗೆ ಹಾಗು ಸಾಧಕರಿಗೆ ಜಮೀನು ನೀಡಲು ಯೋಚನೆ ಮಾಡಿದ ಸರಕಾರ ಎಲ್ಲಿಂದಲೋ ಬಂದು ವ್ಯವಹಾರ ಮಾಡುತ್ತೇನೆ ಎಂದವರಿಗೆ ಎಕರೆಗಳ ಲೆಕ್ಕದಲ್ಲಿ ಭೂಮಿ ಹಂಚಿತು. ರೌಡಿಸಂ ಮಾಡುತ್ತಿದ್ದವರು ರಿಯಲ್ ಎಸ್ಟೇಟ್ ದಂಧೆಗೆ ಇಳಿದರು. ಇಲ್ಲಿನ ಕೆರೆಗಳ ಸಮಾಧಿಯ ಮೇಲೆ ಕಟ್ಟಲ್ಪಟ್ಟ ಬಹುಮಹಡಿ ಕಟ್ಟಡಗಳು ಮೂಲವಾಸಿಗೆ ನೆರಳು ಕೊಡಲಿಲ್ಲ. ನೆತ್ತಿಯ ಮೇಲೆ ಶರವೇಗದಲ್ಲಿ ರೈಲುಗಳು ಓಡಾಡುವಷ್ಟು ಬೆಂಗಳೂರು ಬೆಳೆದು ನಿಂತಿತು.

ಬೆಂಗಳೂರಿನ ಈ ಅಭಿವೃದ್ಧಿಯನ್ನು ನೋಡುತ್ತಲೇ ಜಯನಗರ, ವಿಜಯನಗರ, ಮಲ್ಲೇಶ್ವರಂನಲ್ಲಿ ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದ ಬಡವರು ಹೆಚ್ಚಿನ ಬಾಡಿಗೆ ಕಟ್ಟಲಾಗದೆ ಜಿಗಣಿ, ದಾಸರಹಳ್ಳಿ ಹಾಗು ಬಿಡದಿಯ ಆಚೆ ಮನೆ ಬದಲಾಯಿಸಿಕೊಂಡರು. ಹಾಗಾದ್ರೆ ಬೆಂಗಳೂರಿನ ಅಭಿವೃದ್ಧಿಯ ನಿಜವಾದ ಪಾಲುದಾರರು ಯಾರು? ಎಷ್ಟು ಜನ ಬೆಂಗಳೂರಿನ ಮೂಲವಾಸಿಗಳ ಬದುಕು ಇಲ್ಲಿನ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ವಿಸ್ತಾರಗೊಂಡಿದೆ? ಇದು ಎಲ್ಲ ಮಹಾನಗರಗಳ ಕಥೆ-ವ್ಯಥೆ.

‍ಲೇಖಕರು admin

8 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading