ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧನಾಗುವುದೆಂದರೆ..

ಶಿಲ್ಪಶ್ರೀ ಜಿ

ದುಃಖಕ್ಕೆ ಮೂಲವಾದ
ಆಸೆಗಳನೆಲ್ಲಾ ಚಿವುಟುತ್ತಾ
ನಿರ್ಮೋಹಿಯಾಗುವುದಾದರೆ

ಕನಸು ಕಾಮನೆ
ಕಲ್ಪನೆಗಳ ತ್ಯಜಿಸಿ
ತ್ಯಾಗಿಯಾಗುವುದಾದರೆ

ಲೋಕಕ್ಕೆ ಕಾಣದ
ಎಲ್ಲಾ ಮುಖವಾಡಗಳ ಕಳಚಿ
ಬೆತ್ತಲಾಗುವುದಾದರೆ

ಭಾವೋದ್ವೇಗಗಳ ಏರಿಳಿತಗಳಿಲ್ಲದೆ
ಸರ್ವಕಾಲಕ್ಕೂ
ಶಾಂತರಸ ಸ್ಥಿರನಾಗುವುದಾದರೆ

ಅರಿಷಡ್ವರ್ಗಗಳ ಹಣಿಸುತ್ತಾ
ಗಾಂಭೀರ್ಯವೇ ಮೈವೆತ್ತಂತೆ
ಬದುಕುವುದಾದರೆ

ಇಹ ಪರಗಳ ನಡುವಿನ
ಪರದೆ ಕಳಚಿ
ಮುಕ್ತನಾಗುವುದಾದರೆ

ಮೌನಿಯಾಗುವುದಾದರೆ

ಧ್ಯಾನಿಯಾಗುವುದಾದರೆ

ಈಗೀಗ
ನಾನೂ
ಬುದ್ಧನಾಗುತ್ತಿರುವ ಭ್ರಾಂತಿ!!

‍ಲೇಖಕರು Admin

14 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading