ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿತ್ತ ಮಳೆ ಎತ್ತೋತು?

-ಗೀತಾ ನಾರಾಯಣ್

“ಬಿತ್ತ ಮಳೆ ಎತ್ತೋತು”?

ಕೂರ್ಗೆ ತಕ್ಕಳ್ರೆ!
ಮಾಡ್ವಾಗೆಯ್ತೆ
ಎತ್ಲುದನ ನಾಕನಿ ಬಿದ್ರೆ
ಸರಸರ ನಾಳಿಕೆ ಬಿತ್ತನ!
ಬಿತ್ತಕ್ ಸಾಲೊಡ್ದು ತಿಂಗ್ಲಾತು..
ಇಟತ್ಗೆ ರಾಗಿಕಣ್ಬಿಡ್ಬೆಕಾಗಿತ್ತು
ಒಲ್ಮಾಳೆಲ್ಲ ಕಾದು ಕಾದು ಮನ್ಗೆಯ್ತೆ………
ಬಿತ್ತರಾಗಿ ಗರ್ಭಾಗಕಾಗ್ಲೆ ಇಲ್ಲ
ರಾಗಿ ಜತೀಲೆ ಎಸ್ರುಬೀಜ ಸುಮ್ನೆ ಮೂಲೆ ಇಡ್ದವೆ
ವಾದೊರ್ಸ ಬೆಳ್ದ್ ಕಾಳು
ಮಾಡ್ದಗ್ಳು ಚುಕ್ಕ್ಯಾದ್ವು
ಓಸ್ದಿನ ಮಿಣ್ಗುಟ್ತವೆ ಕೈಗೇ ಸಿಕ್ಕಲ್ಲ…ದನಕರಿಗೆ ಮೇವಾನ ಆಗದು! ಈಸ ಓಸ ನಾಕ್ ಕಾಳು ಕಣುಕ್ ಬಿದ್ರೆ
ಮುದ್ದೆ ನಾತ ಕುಡಿಬೌದ…
ಮುಂಗಾರ್ಗೆ ಮಾಟ ಮಾಡ್ಸಿರು
ದುಡ್ನರು ಓಟು ಕಾಡ್ಮುಗ್ಸಿ ಮಳ್ಗುಳ್ನೆ ಕುತ್ಗೆ ಇಸ್ಕಿರೆ ಮುಂದುಟ್ಟ ಮಕ್ಳು ಪಾಡೇನು?
ಬಡುಗ್ಲು ಗಾಳೊಯ್ದ್ರೆ ಬಡ್ದನೆದ್ನಿಂತ್ಕಮ್ತವೆ ಅಂಬರು ಮಳೊಯ್ಯುತ್ತೆ ಅಮ್ತ ಸ್ವಪ್ನಾಗದು ದನ್ಗುಳ್ಗೆ…..
ಬೂಮ್ತಾಯಿ ಉಸ್ರುಕಟ್ಸಿ ಏನ್ ಬಾಸಾಕ್ಕೆಮ್ತರೆ?
ಇಟತ್ಗೆ ರಾಗೊಂದ್ರಾಗೆಲ್ಲ ಬುಡೊಡ್ದು ಒಂದುಬ್ರ ಅರ್ತೆ ಒಡಿಬೇಕಾಗಿತ್ತು…….
ಊರಾಗ್ಲು ಮಕ್ಳುಮರೆಲ್ಲ
ಕೈಯ್ಯಗೊಂದು ಮಾತಾಡದ್ನ ಇಡ್ಕಂಡು ಬೆಂದಿದ್ಯಾವ್ದು ಬೇಯುದ್ಯಾವ್ದು ಅಮ್ತ ತಿರುಗ್ತವೆ……
ದೊಡ್ಡಳ್ಳ ಮುಂಗಾರ್ನಗೆ ಒಂದ್ಪಟು ಕುರಳ್ಳಿ ಕೆರೆ ತಬ್ಕಮದು……
ಸ್ವಾಮಿ ಬೂತ್ರಾಯ ಕೈಬಿಟ್ಟೆಲ್ಲೋ ಊರೂರ್ನೆ
ಊರಗೆ ಸಾರಾಕುಸ್ರೋ ಮಣ್ಣಮ್ತಾಯಿ,ಜಡೆಗೊಂಡ ಬೂತ್ರಾಯ, ಓಸಾಳ್ನು ಮೆರಣ್ಗೆ ಒಳ್ಡ್ಸಿ ಸುತ್ತೇಳಳ್ಗು ಮಸ್ರನ್ನನನ ಹಾಕ್ಸಿರೆ ಸ್ವಾಮಿ ಕಣ್ಬಿಟ್ಟು ಹಳ್ಳ ಕೊಳ್ಳ ಅರ್ದವೇನೊ?! ಕರ,ಕುರಿ,ಮರಿ,ದನ ಎಮ್ಮೆಲ್ಲ ಬಡುಕ್ಲಾದ್ವು; ಗುಡ್ದಗೆ ಅಸ್ರು ಮೇವಾಡದು ಒಂತಟಿನನ ಮಳೊಯ್ದಿದ್ರೆ? ಮುಂಗಾರ್ಗುಡ್ಡ ಓಟು ಒಣ್ಗಿ ಬರ್ಲಾಗೆಯ್ತಲ್ಲ ಕುರ್ಯರ್ ಪಾಡೇನು?
ಮುಗ್ಲಗುರಿತನಲ್ಲ ಸ್ವಾಮಿ ಅವ್ನ್ಗಾರ ಗ್ಯಾನ ಬ್ಯಾಡ್ವ..
ಬಿತ್ತ ಮಳೆ ಬೆಂಕಿ ಮಾಡ್ಬ್ಯಾಡಪ್ಪ; ಬಡ ಒಯ್ಸು
ಊರ್ ಸುತ್ಮುತ್ತ ಒಲ್ಮಾಳೆಲ್ಲ ಅಚ್ಗಾಗ್ಲಿ……..

‍ಲೇಖಕರು Admin

8 August, 2026

2 Comments

  1. prathibha nandakumar

    ಬಹಳ ಚೆನ್ನಾಗಿದೆ. ನಿಮ್ಮ ಕವನಗಳನ್ನು ಓದುತ್ತಿದ್ದೇನೆ. ನಿಮ್ಮ ಈ ಭಾಷೆ ಬಳಕೆ ನಿಮಗೇ ವಿಶಿಷ್ಟವಾದುದು ದಯವಿಟ್ಟು ಮುಂದುವರಿಸಿ.
    ಪ್ರತಿಭಾ ನಂದಕುಮಾರ್

  2. prathibha nandakumar

    ನಿಮ್ಮ ಪಾರಿಜಾತ ಆಯಲು ಹೋದೆ ಕೂಡಾ ಒಳ್ಳೆಯ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading