-ಎಂ.ವಿ. ಶಶಿಭೂಷಣ ರಾಜು
ಕಳೆದು ಹೋಗುವುದು!!
ಕಳೆದುಕೊಳ್ಳುವುದು
ಕಳೆದುಹೋಗುವುದು
ಯಾವುದು ಸುಖ?
ಸುಖ,
ದುಃಖ,
ಪ್ರೇಮ,
ಕಾಮ –
ಕಳೆದುಕೊಳ್ಳುವುದು,
ಹಗುರಾಗುವುದು.
ಅನಂತತೆಯಲ್ಲಿ,
ಬ್ರಹ್ಮಾಂಡ ಅವಕಾಶದಲ್ಲಿ,
ನಿಸರ್ಗದಲ್ಲಿ,
ಸಾಗರದಾಳದಲ್ಲಿ,
ಕಟ್ಟಡವಿಯಲಿ
ಕಳೆದುಹೋಗುವುದು.
ಕಳೆದುಕೊಳ್ಳಲು
ತನ್ನದೆನ್ನುವ
ವಸ್ತು ಯಾವುದು?
ಕಳೆದುಹೋಗುವುದರ
ಸುಖ
ಬರೀ ಇಲ್ಲವಾಗುವುದರಲ್ಲಿ
ಇರದು;
ಇದ್ದು ಇಲ್ಲದಂತಾಗಬೇಕು!
ತನ್ನನ್ನೇ ತಾನೇ ಹುಡುಕಿಕೊಳ್ಳಲು
ಕಳೆದುಹೋಗಲೇಬೇಕು;
ಮನಹಗುರಾಗಲು ಎಲ್ಲವನ್ನೂ
ಕಳೆದುಕೊಳ್ಳಬೇಕು.






0 Comments