ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ದನಿಯೆ ಬಾ ತನುವಿನೊಳಗೆ ತಾನಾಗಿ ಬಾ..

ಉರಿಮೊಳೆ

anupama-prasadಅನುಪಮಾ ಪ್ರಸಾದ್

ಅಪಮಾನದ ಉರಿಮೊಳೆಯ
ಎದೆಯೊಳಗೆ ನೆಟ್ಟು
ಯಾತನೆಗಳ ಮೂಟೆಯ
ಬೆನ್ನ ಮೇಲೆ ಹೊತ್ತು
ಪ್ರತಿರೋಧದ ನರದ ಉಸಿರ ಹತ್ತಿಕ್ಕಿ
ಬೆಂಗಾಡಿನಲಿ ಸುಡುನೆತ್ತಿಯಲಿ
ಮೈಲುದ್ದ ನಡೆದು ನಿಗಿನಿಗಿ ಒಲೆಯಾಗಿದೆ ಕರುಳು||

ನರ ನಾಡಿಗಳು ಬತ್ತುವ ಮುನ್ನ
ದೇಹ ಗಡಿಗೆ ಸೀಯುವ ಮುನ್ನ
ಸೆಲೆಯಿಲ್ಲದ ಗಂಟಲಿಗೆ ಜೀವಬನಿಯಾಗಿ
ಹೊಕ್ಕುಳ ಸುಳಿಯಿಂದ ಪಾಕವಾಗಿ ಬರುವ ದನಿಗಾಗಿ
ಶತ ಶತಮಾನಗಳಿಂದ ಜೀವ ಕಾಯುತ್ತಿದೆ
ಹಾಡುವುದಿದೆ ನನಗೆ ಎದೆ ಸುಡುವ ದಾವಾನಲದ ಗಾಥೆ
ಆತ್ಮ ಕಲಕುವ ನೋವಿನ ಗೀತೆ
ಬಾ ದನಿಯೆ ಬಾ ತನುವಿನೊಳಗೆ ತಾನಾಗಿ ಬಾ||

‍ಲೇಖಕರು Admin

22 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading