ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಿನ್ನೂ ಬಾಕಿಯಿದೆ…

ಮುತ್ತು ಬಳ್ಳಾ ಕಮತಪುರ

ಹರಿಯುವ ನದಿಯ ಸುಳಿಯಲಿ ಒಂಟಿತನ ಬದುಕಿನ್ನೂ ಬಾಕಿಯಿದೆ |
ಮುಡಿಯುವ ಮಲ್ಲಿಗೆ ಘಮದಲಿ ಮೌನತನ ಬದುಕಿನ್ನೂ ಬಾಕಿಯಿದೆ ||

ಕರಗುವ ಕಣ್ಣೀರ ಹನಿಯಲಿ ನಿನ್ನತನ ಇನ್ನೂ ಜೀವಂತ ಉಳಿದುಕೊಂಡಿದೆ |
ಮಾತಿಗೆ ನಡೆ ನುಡಿಗಳಿಂದ ಕಿವಿಯಾಗುವ ಗಟ್ಟಿತನ ಬದುಕಿನ್ನೂ ಬಾಕಿಯಿದೆ ||

ಸಹಿಸುವ ದಹಿಸುವ ನನ್ನನ್ನೊಳಗಿನ ಚಡಪಡಿಕೆ ಬಯಲಾಗಬೇಕಿದೆ |
ಅವಮಾನದ ಉರಿಯಲಿ ಹಗಲಿನ ಜಾಣತನ ಬದುಕಿನ್ನೂ ಬಾಕಿಯಿದೆ ||

ಸವೆದ ದಾರಿಯಲಿ ಓದದೆ ಉಳಿದ ಅದೆಷ್ಟು ಘಟನೆಗಳು ಉತ್ತರಿಸಬೇಕಿದೆ ?
ನೆಲದ ಮಕ್ಕಳ ಹಿಮಪಾದದ ಕಾಲ್ನಡಿಗೆ ಸರಳತನ ಬದುಕಿನ್ನೂ ಬಾಕಿಯಿದೆ ||

ಬಗೆಹರಿಯದ ವಿಚಾರಗಳಿಗೆ ಕಿಲುಬು ಹಿಡಿದ ಮನಸುಗಳೆ ಕಾರಣ ಮುತ್ತು|
ಗೆಲುವಿನ ಚೆಲುವಿನ ಪಾರ್ಥನೆಯಲಿ ಸೋತವನ ಬದುಕಿನ್ನೂ ಬಾಕಿಯಿದೆ ||

‍ಲೇಖಕರು Admin

10 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading