ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದರಿನಾಥ ಪಳವಳ್ಳಿ ಹೊಸ ಕವಿತೆ- ಮುದಿ ಚಪಲ ಚಿತ್ತ…

ಬದರಿನಾಥ ಪಳವಳ್ಳಿ

ಯಾರನೋ ಏತಕೋ ಹುಡುಕು
ಮಾದಕ ಕಂಗಳು ಸವರಿದೊಡನೆ
ತುಕ್ಕು ಗಟ್ಟಿದ ತಂತಿಗಳಲೂ ಕಂಪನ,
ಗಸಿ ಬೂದಿ ಇಜ್ಜಲಲಿ ತಿಕ್ಕಿ ತಿಕ್ಕಿಯೆ
ಫಳ ಫಳಸಿ ಬಿಡುವ ಅಕಾಲ ಕೆರೆತ

ಸಹಸ್ರ ಪಾಕಗಳ ತಳವಿಡಿಸಿದ
ಗರಿಮೆ ಹೊತ್ತ ಹಳೆಯ ಬಾಣಲಿ
ಅಂಡು ಸುಡಿಸಿಕೊಂಡು ಕರಕಲು,
ಒಡಲ ಪೂರ ಅರೆಬರೆ ತೊಳೆದ
ಪುರಾತನ ಪಾಪ ಕರ್ಮಗಳ ಜಿಡ್ಡು

ಚಾಲ್ತಿಯಲ್ಲಿಡಲು ಯವ್ವನಾಸಕ್ತಿ
ಇಲ್ಲದುತ್ಸಾಹ ಆರೋಪಿಸಿಕೊಂಡು
ಎರವಲು ಹಸಿರೆಲೆಗಳ ಮೈ ಹೊದ್ದು,
ಬೇಡಿಕೆ ಅಪಪೋಲಿ ಆಸೆಗೆ ಬಿದ್ದು
ಬರಡು ಬೋರೊಳೂ ಜಲಪೂರ್ಣ

ಕಾಲ ಸರಿದಂತೆ ಕಾಲವಾಗಿ ಹೋದ
ವ್ಯರ್ಥ ಊದಿಗೆ ಕೆಂಡವಾಗದ ಕಿಡಿ
ಒಲೆಯಲೇ ಅಟಮಟಿಸಿ ಆರಿಹೋಗಿ,
ಗತ ಕಾಲದ ಜ್ವಾಲಾಮುಖಿ ಉಗುಳು
ಈಗ ಬರಿಯ ತೊಟ್ಟಿಕ್ಕು ಲಾಲಾರಸ!

‍ಲೇಖಕರು Admin

31 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading