ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮವನ್ನೇ ಉಸಿರಾಡೋಣ

ಮಲ್ಲಿಗೆ

‘ನಿನಗೆ ಹೇಳಲೆಂದೇ
ನನ್ನ ಕೈಗಡಿಯಾರ ಲೆಕ್ಕ ಇಡುತ್ತಿದೆ ನೋಡು’
ಎಂದು ನಡೆದ ಹೆಜ್ಜೆಗಳ ಲೆಕ್ಕವನ್ನೂ…
ಬಿಡದೆ ಕೊಟ್ಟವ ನೀನು.

ಪ್ರತಿ ಉಸಿರನ್ನೂ ಎಣಿಸೆಣಿಸಿ
‘ಇಷ್ಟು ಸಲ ನೆನಪಿಸಿದೆ’
ಎನ್ನುವಾಗ ಉಸಿರೇ ಆಗಿ
ನನ್ನೊಳು ಸೇರಿ ಹೋದವ ನೀನು.

‘ಕೊನೆಯ ತುತ್ತು ನನ್ನದೇ ಇರಲಿ ಎಂದು’
ತುತ್ತ ಕೈಗೆತ್ತಿಕೊಂಡಾಗಲೂ
ನೆನಪಿಸುವವ ನೀನು.

‘ನನ್ನ ಮರೆತೇ ಬಿಡುವಿಯಾದರೆ
ಚಂದದೊಂದು ಸುಳ್ಳಾದರೂ ಹೇಳಲು ಕಲಿ
ಹಾಗಾದರೂ ಬದುಕುವೆ’
ಅಂದವ ನೀನು

ಇಂಥವನ ಕುರಿತೇ.. ಹರಕು ಬಾಯಿಯ
ಲೋಕ ಮಾತಾಡಿತು
ನನಗೆ ಕಾಳಜಿಯ ಕಥೆ ಹೇಳಿತು.

ಗೊತ್ತಾ ನಿನಗೆ?
ಹಾಗೇ ಮಾತಾಡಿಕೊಂಡವರು
ಅರ್ಧ ನಿನ್ನ ಹಿಂದೆ ಬಿದ್ದವರು
ಇನ್ನರ್ಧ ನನ್ನ ಹಿಂದೆ!

ನಮ್ಮಿಬ್ಬರನ್ನೂ.. ಮರೆತು ಜಗತ್ತೀಗ
ಸಾವಿನ ಕುರಿತೇ ಚಿಂತಿಸುತ್ತಿದೆ
ನಾವು ಮಾತ್ರ ಪ್ರೇಮವನ್ನೇ. ಉಸಿರಾಡೋಣ
ನಾಳೆಯೂ ಬದುಕಿರಲು

‍ಲೇಖಕರು Avadhi

11 May, 2021

1 Comment

  1. Nagaraj Harapanahalli

    ಚೆಂದ ಕವಿತೆ. ಜೀವಂತ ಸಾಲುಗಳು.

    ನಾವು ಮಾತ್ರ ಪ್ರೇಮವನ್ನೇ ಉಸಿರಾಡೋಣ ,ನಾಳೆಯೂ ಬದುಕಿರಲು ಎಂಬ ಸಾಲುಗಳು ಅರ್ಥಪೂರ್ಣ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading