ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು?' – ಟಿ ಎಸ್ ಗೊರವರ ಕವಿತೆ

– ಟಿ ಎಸ್ ಗೊರವರ

ಪುಡಿಯಾಗಲಿ ನಮ್ಮಿಬ್ಬರ ನಡುವಿನ ಅಹಮ್ಮಿನ ಗೋಡೆ
ನನ್ನದೋ ನಿನ್ನದೋ ಗೊತ್ತಿಲ್ಲ ;
ಪ್ರಮಾದಗಳು ಘಟಿಸುವವು ದಿನ ಬೆಳಗಾದರೆ
ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು?
 
ಈ ಮೌನ ಹಿತವಾಗಿತ್ತು ಮೊದ ಮೊದಲು
ಮೌನದೊಳಗೂ ಜಿನಗುತ್ತಿತ್ತು ಭರಪೂರ ಪ್ರೀತಿ
ನೀನು ಮಾತು ಬಿಟ್ಟ ಮರುದಿನದ ಮೌನ
ಕಡು ಬೇಸಿಗೆಯ ದಿನ ;
ಯಾತನೆಯಾಗಿ ತೊಯ್ಯುತಿವೆ ಕಣ್ಣುಗಳು
 
ಬೆಳೆಯೊಳಗೆ ಕಳೆಯೂ ಬೆಳೆಯುವುದು
ಮೊಸರೊಳಗೂ ಬೀಳುವುದು ಒಮ್ಮೊಮ್ಮೆ ಹರಳು
ಹಾಗಂತ ಬೆಳೆ, ಮೊಸರು ಬೀಸಾಕುವುದು ಸರಿಯೇನು?
ತೆಗೆಯಬೇಕು ಕಳೆ, ಹರಳು
 
ಸರಸದಲಿ ವಿರಸ ಹಣಿಕಿ ಹಾಕುವುದು ಆಗಾಗ
ಕ್ಷುಲ್ಲಕವದು ತುಂಬು ಪ್ರೇಮದಲಿ
ಹುಣ್ಣಿಮೆಯೂ ಇರಲಿ, ಅಮವಾಸೆಯೂ ಬರಲಿ
ಮಿಂದೇಳುವ ಪ್ರೇಮದಲಿ ನಮ್ಮ ಪಾಡಿಗೆ ನಾವು

‍ಲೇಖಕರು G

4 September, 2014

2 Comments

  1. Vithal Dalawai

    ಬೆಳೆಯೊಳಗೆ ಕಳೆಯೂ ಬೆಳೆಯುವುದು
    ಮೊಸರೊಳಗೂ ಬೀಳುವುದು ಒಮ್ಮೊಮ್ಮೆ ಹರಳು
    ಹಾಗಂತ ಬೆಳೆ, ಮೊಸರು ಬೀಸಾಕುವುದು ಸರಿಯೇನು?
    ತೆಗೆಯಬೇಕು ಕಳೆ, ಹರಳು
    ತುಂಬ ಇಷ್ಟವಾದ ಸಾಲುಗಳು. ಕಾವ್ಯಯಾನ ಮುಂದುವರೆಯಲಿ.

  2. mmshaik

    nice..very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading