ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಆಯ್ದಕ್ಕಿ

ಪ್ರತಿಭಾ ನಂದಕುಮಾರ್

ಅನ್ನ ದೇವರ ಎದುರು

ಇನ್ನು ದೇವರಿಲ್ಲ

ಅಂಬಾನಿ ಅದಾನಿ ಮತ್ತವರ ಆಳುಗಳೆಲ್ಲ 

ಅನ್ನ ಬಿಟ್ಟು ಚಿನ್ನ ತಿನ್ನುವಾಗ

ಗಡ್ಡಧಾರಿಗಳು ಹಿಡಿಯಕ್ಕಿ ಕೊಡದೆ ಮೀಸೆ ತಿರುಗಿಸುವಾಗ

ಶರಣೆ ಆಯ್ದಕ್ಕಿ ಲಕ್ಕಮ್ಮ ಹಾದುಹೋದಳು

ಈಸಕ್ಕಿಯಾಸೆ ನಿಮಗೇಕೆ, ಈಶ್ವರನೊಪ್ಪ

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ

ನಮಗೆ ಎಂದಿನಂದವೇ ಸಾಕು, ಕೊಟ್ಟಷ್ಟು ಕೊಡಿ

ಎಂದಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದರು. 

ಭಾವಶುದ್ಧವಾಗಿ ತಿಪ್ಪೆಯ ತಪ್ಪಲ ಅಕ್ಕಿಯ ತಂದು

ನಿಶ್ಚೈಸಿ ಮಾಡುತ್ತಿದ್ದವಳು ಹೋಗಿ ಅಲ್ಲಿಯೇ ಸುರಿದು ಬನ್ನಿ

ಪಡಿತರ ಅಂಗಡಿಯಿಂದ ಕಡದಲ್ಲಿ ತಂದ ಅಕ್ಕಿಯೊಂದಿಗೆ ಹನುಮಕ್ಕ (ಎಡ) ಮತ್ತು ಆಕೆಯ ಮಗಳು

ಎಂದಳು ಅನ್ನಭಾಗ್ಯಕ್ಕೆ ಕಂಟಕ

ಮನದ ಮಾತಲ್ಲಿ ಮುಗ್ಗಿದ ಅಕ್ಕಿ ರಾಜಕೀಯ

ನವಿಲಿಗೆ ಕಾಳುಣಿಸುವವರು

ಹಸಿದ ಕೂಸಿಗೆ ಗಂಜಿ ಉಣಿಸಲಾರರು

ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ತಂಡುಲವ ಕೂಡಿಹಾಕಿ ತೊಡೆತಟ್ಟುವ ಕುಟಿಲರೇ

ಅಕ್ಕಿಗೆ ಬೀಗ ಹಾಕುವ ನಿಮ್ಮ ವಿಕಟತನ

ನಮಗೆ ಸಲ್ಲದಬೋನ.

ಬನ್ನಿ ನೈವೇದ್ಯಕ್ಕೆ ನಮ್ಮ ಮನೆಗೆ

ನಿಮ್ಮ ಘನ ಹೊಟ್ಟೆ ತುಂಬಿಸುತ್ತೇವೆ

ನಮ್ಮದು ನಿತ್ಯ ದಾಸೋಹದ ಪರಂಪರೆ.

‍ಲೇಖಕರು avadhi

19 June, 2023

1 Comment

  1. ದಿಲೀಪ್ ಎನ್ಕೆ

    ಅವಧಿ ಗೆ ನಾ ಹೊಸ ಅತಿಥಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading