ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಕೊಡಗನೂರ್ ಕವಿತೆ- ಅನುಭಾವದ ಲಹರಿಯಲ್ಲಿ ಬಿದರಹಳ್ಳಿ…

ಪ್ರಕಾಶ್ ಕೊಡಗನೂರ್

1. ಅನುಭಾವದ ಲಹರಿಯಲ್ಲಿ ಬಿದರಹಳ್ಳಿ

ಮೊದಲ ಬಾರಿಯೇ
ಮದಿರಾಮೃತವ ಹೀರಿ
ಮನೆಗೆ ಕಾಲಿಟ್ಟವನನ್ನ
ಕಲ್ಲುಸಕ್ಕರೆ ಕೊಟ್ಟು
ಸ್ವಾಗತಿಸಿ ಕುಳ್ಳಿರಿಸುತ್ತಾ
ಹೊಟ್ಟೆಗೆ ತಣ್ಣನೆಯ
ಶರಬತ್ತು ನೀಡಿ
ನನ್ನೆಲ್ಲ ಒದರಾಟಕ್ಕೂ
ಹೂಂಗುಡುತ್ತಲೇ ಉಪಚರಿಸುತ್ತಾ
ದೇಹದ ಜೊತೆ
ಮನಸ್ಸನ್ನೂ ಮತ್ತನ್ನೂ
ತಣಿಸಿ ಮಾನವಾಂತಃಕರಣದ
ದಿವ್ಯಪ್ರದರ್ಶನಗೈದಿರಿ ಒಮ್ಮೆ

ಕೆಲ ಕಾರ್ಯಕ್ರಮಗಳಿಗೆ
ಬಂದು ಹಾರೈಸಿದುದಲ್ಲದೆ
ಸಂಭಾವನೆಯಿರಲಿ ತಂದ ಕಾರಿಗೂ
ಇಂಧನದ ಖರ್ಚು ಬಯಸದೆ
ಖ್ಯಾತನಾಮರ ಬಡಿವಾರದ
ಗಡಿಗೆಯನ್ನೊಡೆದವರಂತೆ
ಫಕೀರತನದಲ್ಲಿ ಮಿಂದಿರಿ ಕೆಲವೊಮ್ಮೆ

ಸಹಧರ್ಮಿಣಿಯ ಅಗಲಿಕೆ
ಮಕ್ಕಳ ವಿದೇಶವಾಸದ ನಡುವೆ
ಬದುಕು ಕೇಟರಿಂಗ್ ಊಟಕೆ
ಸೀಮಿತವಾದರೂ ಅಳುಕದೆ
ಮತ್ತದೇ ಕಳಕಳಿಯ
ತೋರಿ ನನಗೆ
ಏಕಾಂತವಾಸದಲ್ಲೂ ಧೀಮಂತಿಕೆಯಲಿ
ಮೆರೆದಿರಿ ಕೊನೆಗೊಮ್ಮೆ

ಸಾಗಿಬಂದ ಹಾದಿಯಲಿ
ಜೇನಿನಂತೆ ನೀವು
ಸವಿದಾಗ ನೆನಪಲ್ಲಿ
ನವಿಲಿನಂತೆ ನಾನು!!

2. ಪ್ರೀತಿ ಕಾರಣಕೆ!

ನನ್ನವಳು
ಜಗದೇಕ ಸುಂದರಿ
ಪ್ರೀತಿ ಕಾರಣಕೆ!

ನನ್ನವಳು
ಅವತರಿಸಿದ ಅರಗಿಣಿ
ಪ್ರೀತಿ ಕಾರಣಕೆ!

ನನ್ನವಳು
ಚಿರಲೋಕದ ಕಣ್ಮಣಿ
ಪ್ರೀತಿ ಕಾರಣಕೆ!

ನನ್ನವಳು
ಮಕರಂದದ ಮಹಾಗಣಿ
ಪ್ರೀತಿ ಕಾರಣಕೆ!

ನನ್ನವಳು
ಭವಲೋಕದ ಬಳುವಳಿ
ಪ್ರೀತಿ ಕಾರಣಕೆ!

‍ಲೇಖಕರು avadhi

18 May, 2023

1 Comment

  1. Siraj

    Good Poems. Liked them

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading