ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಚ್ಚೆ ನಂಜುಂಡಸ್ವಾಮಿ ಕವಿತೆ- ಭಗವಂತ ಎಲ್ಲಿ ಇರುವೆ ನೀ..

ಮೂಲ: ಸ್ವಾನಂದ್ ಕಿರ್ಕಿರೆ

ಕನ್ನಡಕ್ಕೆ: ಪಚ್ಚೆ ನಂಜುಂಡಸ್ವಾಮಿ

ಇಡೀ ಭೂಮಿಯನ್ನು, ನಡೆಸುವೆಂದು ಕೇಳಿರುವೆ..
ನನ್ನ ಪ್ರಾರ್ಥನೆ ಕೇಳು, ನಿನ್ನ ಮನೆಗೆ ನನ್ನ ಕರೆದು..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ಅಲೆವ ಮನಕೆ ದಾರಿ ತೋರುವೆಂದು ನಂಬಿರುವೆ..
ನಾನು ಕಳೆದುಹೋಗಿಹೆ, ನಿನ್ನ ಮನೆಗೆ ನನ್ನ ಕರೆ ನೀ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ನಾ ಪೂಜೆ ಮಾಡಲೇ? ನಮಾಜ್ ಗಳ ಓದಲೇ?
ಪ್ರಾರ್ಥನೆಗಳ ಮಳೆ ಸುರಿಸಲೇ…
ನೀ ಮಂದಿರದಲ್ಲಿಲ್ಲ
ನೀ ಚರ್ಚ್ನಲ್ಲೂ ಇಲ್ಲ
ಹುಡುಕಿ ಕಣ್ಗಳು ಸುಸ್ತಾದ್ವು ನನಗೆ…
ಹುಡುಕಿ ಕಣ್ಗಳು ಸುಸ್ತಾದ್ವು ನನಗೆ…

ಎಂಥಾ ಆಚರಣೆಯೇ ಇದ್ದರೂ ಪೂರೈಸುವೆ…
ಕೋಟಿಗಟ್ಟಲೆ ಜನರ ರೀತಿ ತಲೆಯ ಬಾಗುವೆ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ನಿನ್ನ ನಾಮವು ಹಲವು
ನಿನ್ನ ಚಹರೆ ಹಲವು
ನಿನ್ನ ಪಡೆವ ದಾರಿಯೂ ಹಲವು..
ನಿನ್ನ ಪಡೆವ ದಾರಿಯೂ ಹಲವು..

ಎಲ್ಲಾ ದಾರಿ ನಡೆದೆ..
ನೀ ಸಿಗಲೇ ಇಲ್ಲ..
ನಿನ್ನ ಬಯಕೆ ನನಗೆ ತಿಳಿಯಲೇ ಇಲ್ಲ..

ಯೋಚಿಸದೆ ಸರ್ವ ಯತ್ನ ಮಾಡುತಿರುವೆನು..
ನಿನ್ನ ಹಠಗಳ ಕಣ್ಣಲ್ಲಿಟ್ಟು ನಿಭಾಯಿಸುತ್ತಿರುವೆ..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

ಇಡೀ ಭೂಮಿಯನ್ನು, ನಡೆಸುವೆಂದು ಕೇಳಿರುವೆ..
ನನ್ನ ಪ್ರಾರ್ಥನೆ ಕೇಳು, ನಿನ್ನ ಮನೆಗೆ ನನ್ನ ಕರೆದು..
ಭಗವಂತ ಎಲ್ಲಿ ಇರುವೆ ನೀ..
ಓ ಅಲ್ಲಾ ಎಲ್ಲಿ ಇರುವೆ ನೀ..

‍ಲೇಖಕರು Avadhi

14 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading