ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಕ್ಕದ ಮನೆ

ಅಜಿತ್ ಹರೀಶಿ

ಪಕ್ಕದಲ್ಲಿ ನಿವೇಶನ ಪಡೆದವನಿಗೆ
ನನ್ನಷ್ಟೇ ಪ್ರಾಯ

ಬೇಕಿಲ್ಲ ಅನುಮತಿ
ಹೆಂಡತಿ ತಿರುಗಾಟಕ್ಕೆ ಹೊರಟುನಿಂತರೆ
ಅವನೂ
ಹೋಗಲೇಬೇಕಾದ್ದ ಹೇಳುತ್ತಾಳೆ
ಅವಳೆ

ಮಗ
ಲಕ್ಷದ
ಬೈಕು ಕೊಳ್ಳುತ್ತೇನೆ ಎನ್ನಬೇಕಷ್ಟೇ
ವರ್ಷ ತೆಗೆದುಕೊಂಡಿದ್ದಾನೆ ಹೇಳಲು

ನಮಗ್ಯಾಕೆ
ಮಂದಿ ಮನೆಯ ಕಿರಿಕಿರಿ
ಒಣ ಉಸಾಬರಿ

ಆದರೂ… ಇರಲಿ ಹೇಳುವೆ;
ಮಗಳು ಬೆಳೆದಿದ್ದಾಳೆ
ಏನೇನೊ ಗುಸುಗುಸು
ಬಹಳ ದಿನಗಳಿಂದ
ಅವಳು ಹೇಳಿಲ್ಲ ಇವನೂ ಕೇಳಿಲ್ಲ
ಹೇಳಿಲ್ಲ ಓದು ಮದುವೆ ಮಣಕಾಲೋ ನನ್ನ ಜವಾಬುದಾರಿ

ತೀರ್ಮಾನದ ಭಾರ ಅವರವರಿಗೆ
ಬಿಡುವ ಅವನ ತೂಕ ನನಗಿಂತ ಕಮ್ಮಿ
ಎತ್ತರ ತುಸು ಹೆಚ್ಚು

ಅಲ್ಲಾಡಿಸಿದ್ದಕ್ಕೆ ಇವಳು
ಎದ್ದೆ ಫಕ್ಕನೆ. ಎಂದಳು –
ಮಾರಾಟ ಮಾಡಿದರಂತೆ
ಪಕ್ಕದ ಖಾಲಿ ನಿವೇಶನವನು
ಕೊಳ್ಳುತ್ತಾರಂತೆ ಹೊರವಲಯದಲ್ಲಿ
ಇನ್ನೂ ದೊಡ್ಡ ಸೈಟು
ಕಡಿಮೆ ರೇಟು

ಕೇಳಿದೆ ಸುಮ್ಮನೆ
ಅಷ್ಟು ದೂರವಾಗುತ್ಯೇ ಪಕ್ಕದ ಮನೆ?

‍ಲೇಖಕರು Avadhi

15 September, 2020

2 Comments

  1. T S SHRAVANA KUMARI

    ಚೆನ್ನಾಗಿದೆ

  2. Amritha

    ಸುಂದರ ಕವಿತೆ. ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading