ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ಕಥೆ ಅಳೆಯಬೇಡ…

ಮೂಲ: ಇಸೈ ಕರುಕ್ಕಲ್
ಕನ್ನಡಕ್ಕೆ : ಕೆ ನಲ್ಲತಂಬಿ

ಇಂದೇ ಮೊದಮೊದಲು ನೋಡಿಕೊಂಡೆವು
ಈ ಸಂಜೆ ನಮ್ಮನ್ನು ಮರಳಾಗಿಸಿದೆ
ನಾವು ಈ ರಾತ್ರಿಯನು ಮೋಹಕ್ಕೆ ನೂಕೋಣ
ನಿನ್ನ ಮೊಲೆ ತೊಟ್ಟಿನಲ್ಲಿ
ತಾಯ್ತನದ ಚಿಲುಮೆ ಉಕ್ಕಿ ಹರಿಯುವುದಾಗಿ
ನಾನು ಸುಳ್ಳು ಹೇಳಲಾರೇ
ನನ್ನ ವಿಶಾಲ ಎದೆಯಲ್ಲಿ
ಅಪ್ಪನ ಸುಖ ಇರುವುದಾಗಿ ನೀನು ಕಥೆ ಅಳೆಯಬೇಡ

ಕೂಡಿ ಕಳೆದ ನಂತರ
ಅಪ್ಪಿಕೊಂಡೇ ಇರಬೇಕಾದ ಅಗತ್ಯ ನಮಗಿಲ್ಲ
ಆರಾಮವಾಗಿ ನಾವು ದೂರ ದೂರ ಮಲಗೋಣ
ಹೆಸರಲ್ಲೇನಿದೆ?
ನಿನ್ನ ಹೆಸರು ಹೆಣ್ಣು
ನನ್ನ ಹೆಸರು ಗಂಡು
ಸಾಕಲ್ಲವೇ?

‍ಲೇಖಕರು Admin

27 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading