ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ರೂಪದ ಹೊರತು ಕಣ್ಣು ಬೇರೇನೂ ಕಾಣಬಾರದು…

ಕುರುಡಾಗಲಿ ಇಂದೆ

– ರೇಣುಕಾ ಎ ಕಠಾರಿ

ಇಲ್ಲದ ಬೆಳಕನು
ಹುಡುಕಲು ಬೆನ್ನಟ್ಟಿದ್ದೇನೆ ಪ್ರತಿದಿನ
ಕತ್ತಲೆ ಚೀರಿಡುತ್ತಿದೆ
ಸಾವ ಭಯಕೆ ಕೂಗಿ ಕೂಗಿ ಸತ್ತೆನೆಂದು

ಲೋಕಪೂಜ್ಯರು ಇದ್ದ ನೆಲ
ಇಂದು ಸಾವಿನ ಕಂಕಣ ತೊಟ್ಟ
ಕಸಾಯಿಖಾನೆಯಾಗಿದೆ
ಹೆಣ್ಣು, ಹೊನ್ನು ಮಣ್ಣು
ಹೊರತಾಗಿಯೂ ಕಲಹವಿದೆಯೇ
ಲೋಕದೆದುರು
 
ಸಂಧಿಗಳೆದುರು ನೊಂದ ಬದುಕಿನ
ಬೊಗಸೆ ಖಾಲಿಯೇ ಇದೆ
ನಿನ್ನ ರೂಪದ ಹೊರತು
ಕಣ್ಣು ಬೇರೇನೂ ಕಾಣಬಾರದು
ಕುರುಡಾಗಲಿ ಬಿಡು ಇಂದೆ
 

‍ಲೇಖಕರು G

8 May, 2015

5 Comments

  1. ಪ್ರಕಾಶ ಬಿ ಜಾಲಹಳ್ಳಿ

    ಕವಿತೆ ಚೆನ್ನಾಗಿದೆ…

  2. ಕಾ.ಹು.ಚಾನ್ ಪಾಷ. ಬಂಗಾರಪೇಟೆ.

    ಕವಿತೆ ಚೆನ್ನಾಗಿ ಬರೆದಿದ್ದೀರಿ.

  3. ಹನುಮಂತ ಹಾಲಿಗೇರಿ,

    ಚಂದ ಕವಿತೆ

  4. Rohini Satya

    Indina stithige kannadi hidida kavana. chennaagide Renuka!

  5. ishwar

    Akka …. Naijateya paripurna saara… Kelavu padagalalli

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading