ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಪಡೆಯುವ ಹಂಬಲದಲ್ಲಿ..

ಕಾಯ್ಕಿಣಿ ಪಾರ್ಲರ್ ಗೆ ಬಂದ ಸಾಲು ಸಾಲು ಬರಹ ಜೋಡಣೆಗೆ ಈಗ ಒಂದು ಚಂದದ ಮುಕ್ತಾಯ 

ಕವಿತೆಯೊಂದಿಗೆ 

parlour1

ನೋವಿಗೆ ಕರೆಯೋಲೆ

ಸಿಂಧುಚಂದ್ರ

ಮತ್ತೆ ಪಾರ್ಲರ್ ಗೆ ಹೋಗಬೇಕು
ನೋವುಣ್ಣುವುದ್ದಕ್ಕಾಗಿ
ಒಂದೊಂದೇ ರೋಮಗಳನ್ನು
ಕೀಳುವಾಗ ಹುಬ್ಬಿನಿಂದ
beauty2ಯಮಯಾತನೆ…
ಕಣ್ಣಿನಿಂದ ದಳದಳ
ನೀರಿಳಿಯುತ್ತಿದ್ದರೂ
ಹಾಗೇ ಕುಳಿತಿರುತ್ತೇನೆ.

ಮೇಣದಂತ ಕ್ರೀಮನ್ನು
ತಲೆಗೆ ಮೆತ್ತಿದರೂ
ಅಲವರಿಕೆಯಾಗುತ್ತಿದೆ
ಎಂದು ಹೇಳುವುದಿಲ್ಲ.

ಬಿಸಿಬಿಸಿ ಪಾಕವನ್ನು
ಚಾಕುವಿನಿಂದ ಕೈ-
ಕಾಲಿಗೆ ಹಚ್ಚಿ, ಪರ್ರೆಂದು
ಕಿತ್ತು ಹಾಕುವಾಗಲೂ
ನಾನು ಮಿಸುಗಾಡುವುದಿಲ್ಲ

ಫೇಶಿಯಲ್ ಎನ್ನುತ್ತಾ
ಕೆಂಡದ ಹಬೆಗೆ ಮುಖವೊಡ್ಡಿಸಿ
ಮೊಡವೆಗಳ ಬುಡ
ಅಲ್ಲಾಡಿಸಿ, ರಕ್ತ
ಚಿಮ್ಮಿಸಿದರೂ, ನಾನು
ಹಾಗೇ ತುಟಿ ಕಚ್ಚುತ್ತೇನೆ

ಅಷ್ಟೇ..
ಚರ್ಮ ಬಿಳಿಯಾಗಲು
ಕೂದಲು ಕಪ್ಪಗಾಗಲು
ಎಷ್ಟೆಲ್ಲಾ ತ್ರಾಸು ಪಡುತ್ತೇನೆ.

ಸುಕ್ಕು ಕಾಣಿಸದಿರಲೆಂದು
ಕಡಿಮೆ ನಗುತ್ತೇನೆ..
ಚಂದವಾಗುವ ಚಪಲದಲ್ಲಿ
ನೋವು ಸಹಿಸುತ್ತಿದ್ದೇನೆ

ನಿನ್ನ ಪಡೆಯುವ ಹಂಬಲದಲ್ಲಿ
ನೋವಿಗೆ ಕರೆಯೋಲೆ
ಕಳಿಸಿದ್ದೇನೆ.

‍ಲೇಖಕರು Admin

8 June, 2016

3 Comments

  1. Sangeeta Kalmane

    ಮದುವೆ ವಯಸ್ಸಿನ ಹೆಣ್ಣಿಗೆ ಮುಖ ಸುಕ್ಕಾಗಿರಲು ಸಾಧ್ಯವೇ?

  2. vasudeva nadig

    koneya saalugalhu hrudaya sparshi

  3. Shama, Nandibetta

    ಪಾರ್ಲರಿನಲ್ಲಿ ಕೂತು ಹುಬ್ಬು ಕೀಳುವಾಗಿನ ನೋವನ್ನು ನೆಪವಾಗಿಸಿಕೊಂಡು ಹೃದಯ ಕಿತ್ತವರ ನೆನೆದು ಅತ್ತವರೆಷ್ಟೋ? ಅದೆಷ್ಟು ಮಂದಿ ನೋವಿಗೆ ಕರೆಯೋಲೆ ಕಳಿಸಿದ್ದರೋ !!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading