ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ನಿನಗೆ ಮತ್ತೆ ಸಿಗುವೆ!

ಮೂಲ: ಅಮೃತ ಪ್ರೀತಂ

ಕನ್ನಡಕ್ಕೆ : ಜಬೀವುಲ್ಲಾ ಎಮ್ ಅಸದ್

ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ನನಗೂ ತಿಳಿಯದದುವೆ

ಬಹುಶಃ ನಿನ್ನ ಕಲ್ಪನೆಯ ಪ್ರೇರಣೆಯಾಗಿ
ನಿನ್ನ ಕ್ಯಾನುವಾಸಿನ ಮೇಲಿಳಿಯುವೆ
ಇಲ್ಲವೇ, ನಿನ್ನ ಅದೇ ಕ್ಯಾನುವಾಸಿನ ಮೇಲೊಂದು
ರಹಸ್ಯಮಯ ರೇಖೆಯಾಗಿ
ನಿನ್ನ ನೋಡುತ್ತಲಿರುವೆ ಮೌನವಾಗಿ
ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ನನಗೂ ತಿಳಿಯದದುವೆ

ಸೂರ್ಯನ ಲಾವವಾಗಿ
ನಿನ್ನ ಬಣ್ಣಗಳಲ್ಲಿ ಕರಗಿಹೋಗುವೆ
ಇಲ್ಲವೇ, ಬಣ್ಣಗಳ ಬಾಹುಗಳಲ್ಲಿ ಆಸಿನನಾಗಿ
ನಿನ್ನ ಕ್ಯಾನುವಾಸಿನ ಮೇಲೆ ಹಾಸಿಕೆಯಾಗುವೆ
ತಿಳಿಯದು ಎಲ್ಲಿ? ಹೇಗೆ? ಆದರೆ,
ನಾ ನಿನಗೆ ಮತ್ತೆ ಸಿಗುವೆ

ಇಲ್ಲವೇ, ನಾನಾಗಿ ಒಂದು ಕನ್ನಡಿಯಾಗೆ
ಹೇಗೆ ಝರಿ ನೀರಿನ ಹಾಗೆ
ನಾನು ನೀರಿನ ಹನಿಗಳನ್ನು
ನಿನ್ನ ತನುವಿನ ಮೇಲೆ ಮಸೆಯುವೆ
ಹಾಗು ಒಂದು ಶೀತಲ ಅನುಭಾವವಾಗಿ
ನಿನ್ನ ಎದೆಯನ್ನಪ್ಪುವೆ
ನನಗಿನ್ನು ಮತ್ತೇನೂ ತಿಳಿಯದು
ಆದರೆ, ಇಷ್ಟು ಗೊತ್ತು!
ಈ ಸಮಯ ಏನಾಗುವುದೋ
ಈ ಜನುಮ ನನ್ನೊಂದಿಗೆ ನಡೆವುದು

ಈ ದೇಹ ಮಡಿದ ಮೇಲೆ,
ಎಲ್ಲವೂ ಮುಗಿದು ಹೋಗುವುದು
ಆದರೆ, ನೆನಪಿನ ನೂಲು ಲೋಕದ ಭಾವಗಳ ಹಾಗೆ
ಆ ಭಾವಗಳ ಆಯುವೆ, ಆ ನೂಲನ್ನು ಎಳೆದುಕೊಳ್ಳುವೆ
ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ನನಗೂ ತಿಳಿಯದದುವೆ

ನಾ ನಿನಗೆ ಮತ್ತೆ ಸಿಗುವೆ….

‍ಲೇಖಕರು Admin

1 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading