ರಾಜಕುಮಾರ್ ಮಡಿವಾಳರ್
ದೀಪ ಹಚ್ಚಿಟ್ಟಿದ್ದೇ ತಡ
ಕತ್ತಲು ಬೆಳಕು! ಕಣ್ಣ ಮುಚ್ಚಾಲೇ ಆಟಕ್ಕಿಳಿದವು…!

ತೇಲುವ ನನ್ನ ದೋಣಿ
ಓಡುವ ನದಿಯ ಮೇಲೆ ಸೇರಬೇಕಾದ್ದ ಬಿಟ್ಟು
ಬಂದ ದಡ ನೆನಪು ನಡುನೀರಲ್ಲಿ…!

ಶಿಸ್ತು ಗೊತ್ತಿಲ್ಲದ ಕಾಡು ಮನುಷ್ಯ
ಅನ್ನುತ್ತಲೇ ಜೊತೆಯಾದವಳ ಸೃಷ್ಟಿ ಎದೆ!
ಅಭಯಾರಣ್ಯ..

ನನ್ನ ಮನೆಯಲ್ಲೂ ಒಂದು ನದಿ ಇದೆ!
ನಿನ್ನೆ ಮಳೆಗೆ ಮಾಳಿಗೆ ಸೋರಿದೆ..!

ನಡೆದದ್ದೇ ಸಾಹಿತ್ಯ ಎಡವಿದ್ದೇ ಸಂಗೀತ
ಸರ್ವ ವಾದ್ಯ ಮಿಡಿತ
ಮಗಾ ಎದ್ದಿರಬೇಕು ಈಗ!






Chennagide
ಹೊಸತನವಿದೆ