ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕವಿತೆ ಇಲ್ಲಿಲ್ಲ

ಗಣೇಶ್ ಅದ್ಯಪಾಡಿ

ಮಂಗಳೂರಿನ ಅದೇ
ಹಳೆಯ ರಸ್ತೆಯ ಹೊಸರೂಪ
ಬಾಯ್ಬಿರಿದ ಫುಟ್ ಪಾತ್‌ನ
ಉದ್ದಕ್ಕೂ ಯಸ್ ಯಸ್
ಎನ್ನುವ ದನಿಗೆ ಬಾಯಗಲಿಸಿ
ನೈಟಿ ಖರೀದಿಸುವ ಹೆಣ್ಮನಗಳು ..

ಅದೇ ಕಾಂಕ್ರೀಟ್ ಗಿರಿ
ಶಿಖರಗಳ ನಡುವೆ
ಒಂದು ಚೂರು ಹೊಲಸು
ಗಿಜಿಗಿಡುವ ರಸ್ತೆಗಳಲ್ಲಿ
ಲಕ್ಷಗಟ್ಟಲೆ ಹಣದ ಓಡಾಟ

ಕಾಲು ಮುರಿದ
ಬೆನ್ನು ಮೂಳೆ ಮುರಿದ
ಕರುಳು ಕಡಿದ
ಮುದುಡಿ ಬಾಡಿದ
ಅದೆಷ್ಟೊ ಉಸಿರುಗಳು
ಕೈಚಾಚುತ್ತಿವೆ …
ನಾನು ನಿರ್ಭಾವಿಯಾಗಿ ಸಾಗುತ್ತೇನೆ..

ಸಿಮೆಂಟ್ ಗೋಡೆಗಳ
ಮೇಲೆ ಕಾಲಿಡುತ್ತಾ ಸಾಗುವಾಗ
ಅದೆಷ್ಟೊ ಮುಖವಾಡಗಳು
ಹೌದು ಮುಖವಾಡಗಳೇ ‌.!!

ನಗುವುದು
ಅಳುವುದು
ಕೆಲವು ಒಂಚೂರು ಭಾವುಕ
ಕೆಲವು ಸತ್ತ ಭಾವದ ಮುಖ
ಒಂದಿಷ್ಟು ಕಾಂತಿಯ ಮುಖಗಳು
ಒಂದಿಷ್ಟು ಬೆವರು ಹರಿಯುವ ವದನಗಳು
ವಿಧ ವಿಧವಾದವು
ಅದೋ ಎಷ್ಟೊಂದು ಕವಿತೆಗಳು
ಈ ಮಾರ್ಕೆಟಿನ ರೋಡಿನಲಿ
ಯಾವುದೂ ಮನಸ್ಸ ಸೇರುವುದಲ್ಲ ..!!

ನಾನು ನನ್ನ ಕವಿತೆಯನ್ನು
ಹುಡುಕಿ ಕಡಲ ದಾರಿಯಲ್ಲಿ ಸಾಗುತ್ತಿದ್ದೇನೆ ..
ಯಾಕೆಂದರೆ ನನ್ನ ಕವಿತೆ ಇಲ್ಲಿಲ್ಲ ..!!!

‍ಲೇಖಕರು Avadhi Admin

29 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading