ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿವ್ಯದರ್ಶಿನಿ ಎಂ ಅನುವಾದಿತ ಕವಿತೆ- ಹಾಯ್ಕುಗಳು…

ಮೂಲ: ಸಿಂಗಪುರ ಪಿಚ್ಚಿನಿಕ್ಕಾಡು ಇಳಂಗೊ

ಕನ್ನಡಕ್ಕೆ : ದಿವ್ಯದರ್ಶಿನಿ ಎಂ

ಕಣ್ಣು
ಪ್ರವಾಹದಲ್ಲಿ
ಹೊರಬರದ ಮೀನು

ನಾನು
ಗಾಳಿಗೂ
ಕವಿತೆಗೂ
ಭಿನ್ನತೆಯಿಲ್ಲದೆ
ಕಾಲಗಳ ಕಟ್ಟಿಕೊಂಡು
(ಶ್ವಾ)(ವಾ)ಸಿಸಿದವನು

ಕಾಗೆ ಬಣ್ಣ
ಕೋಗಿಲೆ
ಕಾಗೆಯ ದನಿಯನು
ಕೊರತೆ ಎನ್ನಬಹುದು
ಬಣ್ಣವನ್ನಲ್ಲ

ಸಾಹಿತ್ಯ
ಲೇಖನಿಯ
ಮುತ್ತು
ಲೇಖನಿಯ
ರಕ್ತ

ಸಾಹಿತ್ಯ
ಕಲ್ಲಾಗಿದ್ದ
ನನ್ನನು
ವಿಗ್ರಹವನ್ನಾಗಿಸಿದ
ಶಿಲ್ಪಿ

ನಾನು
ತಾಯಿ ಕೊಟ್ಟ
ವರ
ಎದೆಹಾಲು
ಕುಡಿದ
ಸಸ್ಯ

ಸಾಹಿತ್ಯ
ಶಿಲಾಯುಗವಾಗಿದ್ದೆ
ವರ್ತಮಾನಕಾಲವನ್ನು
ಭವಿಷ್ಯತ್ಕಾಲವನ್ನು
ನನಗೆ
ನಿರಂತರವಾಗಿಸಿದ ದಾನಿ

‍ಲೇಖಕರು Admin

8 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading