ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಟಿಯ ತೊಟ್ಟಿನಲಿ ಕಚ್ಚಿ ಹಿಡಿದಿದ್ದೇನೆ…

ಆ ಘಳಿಗೆ

ಆನಂದ ಬೋವಿ


ತುಟಿಯ ತೊಟ್ಟಿನಲಿ
ಕಚ್ಚಿ ಹಿಡಿದಿದ್ದೇನೆ
ನೀ
ಎದ್ದು ಹೋದ ಘಳಿಗೆಯನ್ನ
 
ಬೆತ್ತಲೆದೆಯ ತುಂಬಿನಲಿ
ತೊಟ್ಟಿಕ್ಕುತ್ತಿದೆ
ನೀ
ಮದರ್ಿಸಿದ ಗೆರೆ
 
ತೊಡೆಯ ನರಗಳಲ್ಲಿ
ಆಯಾಸಗೊಂಡಿದೆ
ನೀ
ರಂಬಿಸಿದ ನೋವು
 
ಕೂದಲೆಳೆಯ ಬೇರು
ನರಳಿದೆ
ನೀ
ತಟ್ಟಿದ ಪೆಟ್ಟಿಗೆ
 
ಕ್ರಾಂತಿಯ ವಿಭಜನೆ
ಐಕ್ಯಗೊಂಡಿದೆ
ನೀ
ಗುರಿಯಿಟ್ಟ ದಾಳಿಗೆ
 
ಇಂಗಬೇಕೆಂದರೆ
ನೆಲವಾಗಲಿಲ್ಲ
ನೀ
ಹರಿಯಲು ಇಲ್ಲ
 
 
ಕಟ್ಟೆ ಕಟ್ಟುವೆ
ದಿಕ್ಕು ತಪ್ಪಿ
ನೀ
ಫಕೀರನಾಗಲು.
 

‍ಲೇಖಕರು G

14 July, 2015

2 Comments

  1. basavanneppa.kambar

    super lines

  2. noorullathyamagondlu

    ಪದ್ಯ ರಸಾಕರ್ಷಣೆಯಿಂದ ಕೂಡಿದ್ದು ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading